ಕನ್ನಡ ಕೇವಲ ಭಾಷೆಯಾಗದೆ ನಮ್ಮ ಬದುಕಾಗಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು: ಕನ್ನಡ ಕೇವಲ ಭಾಷೆಯಾಗದೆ ಅದು ನಮ್ಮ ಬದುಕಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡದ ಸ್ವಾಭಿಮಾನ ಮತ್ತು ಆಸ್ಮಿತೆಯನ್ನು ಪ್ರತಿಯೊಬ್ಬರು ಎತ್ತಿಹಿಡಿಯಬೇಕು ಎಂದರು.
ನಾವೆಲ್ಲರೂ ಕನ್ನಡಿಗರು ಎಂದು ಹೇಳಬೇಕು. ಹೆಮ್ಮೆಯಿಂದ ಮುನ್ನುಗ್ಗಬೇಕು. ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ ಎಂಬುವುದು ನಮ್ಮ ಮಂತ್ರ ಆಗಬೇಕು ಎಂದರು.
ಕರ್ನಾಟಕಕ್ಕಾಗಿ ಕಲಿಯುತ್ತೇವೆ. ಕರ್ನಾಟಕ್ಕಾಗಿ ದುಡಿಯುತ್ತೇವೆ ಕರ್ನಾಟಕಕ್ಕಾಗಿ ಬದುಕುತ್ತೇಲೆ ಎಂಬುವುದು ನಮ್ಮ ಸಂಕಲ್ಪ ಆಗಬೇಕು ಎಂದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಎಲ್ಲ ಭಾಷೆಗಳು ಮಾತೃಭಾಷೆ ಮತ್ತು ರಾಷ್ಟ್ರ ಭಾಷೆ ಎಂದು ಹೇಳಿದ್ದಾರೆ. ಹೀಗಾಗಿ ಕನ್ನಡ ಮಾತೃಭಾಷೆ ಕೂಡ ಹೌದು ರಾಷ್ಟ್ರ ಭಾಷೆ ಕೂಡ ಆಗಿದೆ ಎಂದು ತಿಳಿಸಿದರು.
ಈಗಾಗಲೇ ಕನ್ನಡಕ್ಕೆ ಮತ್ತಷ್ಟು ಗಟ್ಟಿತನ ಕೊಡುವ ನಿಟ್ಟಿನಲ್ಲಿ ಕನ್ನಡ ಭಾಷೆ ಸಮಗ್ರ ವಿಧೇಯಕವನ್ನು ಡಿಸೆಂಬರ್ ನಲ್ಲಿ ಮಂಡನೆ ಮಾಡಲಾಗುವುದು. ಈಗಾಗಲೇ ವಿಧೇಯಕದ ಕುರಿತಂತೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ ಎಂದರು.