ಸೂಕ್ಷ್ಮ ಪ್ರದೇಶಗಳು ಈಗ ಮುಕ್ತ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಪಾದನೆ

ಸೂಕ್ಷ್ಮ ಪ್ರದೇಶಗಳು ಈಗ ಮುಕ್ತ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಪಾದನೆ

ವದೆಹಲಿ: ದೇಶದ ಬಹುತೇಕ ಸೂಕ್ಮ ಪ್ರದೇಶಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎಂಟು ವರ್ಷಗಳ ಅವಧಿಯಲ್ಲಿ ಒಟ್ಟಾರೆ ಭದ್ರತಾ ವ್ಯವಸ್ಥೆಯು ಗಣನೀಯವಾಗಿ ಸುಧಾರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

“ರಾಷ್ಟ್ರೀಯ ಪೊಲೀಸ್‌ ಸ್ಮರಣಾರ್ಥ ದಿನ’ದ ಅಂಗವಾಗಿ ನವದೆಹಲಿಯ ಚಾಣಕ್ಯಪುರಿ ಪ್ರದೇಶದ ರಾಷ್ಟ್ರೀಯ ಪೊಲೀಸ್‌ ಸ್ಮಾರಕದಲ್ಲಿ ಆಯೋಜಿದ್ದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, “ಈ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಹಿಂಸಾಚಾರ ಶೇ.70ರಷ್ಟು ತಗ್ಗಿದೆ. ಇದು ಈಶಾನ್ಯ ರಾಜ್ಯಗಳಿಗೆ ಆನಂದದಾಯಕ ಸಂಗತಿಯಾಗಿದೆ,’ ಎಂದರು.

ಜನಪ್ರತಿನಿಧಿಗಳು:
“ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ಎಸೆಯುತ್ತಿದ್ದವರು ಈಗ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರದೇಶದ ಅಭಿವೃದ್ಧಿಯಲ್ಲಿ ಅವರೂ ಭಾಗಿಯಾಗುತ್ತಿದ್ದಾರೆ,’ ಎಂದು ಅಮಿತ್‌ ಶಾ ಹೇಳಿದರು.

ರಾಜಕೀಯ ಸಮಸ್ಯೆ ಅಲ್ಲ:
“ಭಯೋತ್ಪಾದನೆಯು ಮಾನವ ಹಕ್ಕುಗಳ ಅತಿ ದೊಡ್ಡ ಉಲ್ಲಂಘನೆಯಾಗಿದೆ. ಆನ್‌ಲೈನ್‌ ಮೂಲಕ ಭಯೋತ್ಪಾದಕ ವಿಚಾರಗಳ ಪ್ರಚಾರವನ್ನು ರಾಜಕೀಯ ಸಮಸ್ಯೆ ಎಂದು ಪರಿಗಣಿಸಲು ಬರುವುದಿಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟವು ದೀರ್ಘ‌ಕಾಲಿಕ, ಸಮಗ್ರ ಮತ್ತು ಸುಸ್ಥಿರವಾಗಿರಬೇಕು ಎಂಬುದು ಖಚಿತಪಡಿಸಿಕೊಳ್ಳಲು ಎಲ್ಲ ದೇಶಗಳು ಬದ್ಧರಾಗಿರಬೇಕು,’ ಎಂದು ಇದೇ ವೇಳೆ 90ನೇ ಇಂಟರ್‌ಪೋಲ್‌ ಸಾಮಾನ್ಯ ಸಭೆಯಲ್ಲಿ ಅಮಿತ್‌ ಶಾ ಪ್ರತಿಪಾದಿಸಿದರು.