ಬಳ್ಳಾರಿ ಉತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ ಅಪ್ಪು ಪ್ರತಿಮೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನಗಲಿ ವರ್ಷಗಳೇ ಕಳೆದರೂ ಅವರ ನೆನಪು ಮಾತ್ರ ಚಿರಸ್ಥಾಯಿಯಾಗಿದೆ. ಈ ಮಧ್ಯೆ ಜ.21ರಂದು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಳ್ಳಾರಿ ಉತ್ಸವ ನಡೆಯಲಿದ್ದು, ಈ ವೇಳೆ ಪುನೀತ್ ರಾಜ್‌ಕುಮಾರ್ ಅವರ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. 23 ಅಡಿ, 3 ಟನ್ ತೂಕವಿರುವ ಬೃಹತ್ ಪ್ರತಿಮೆಯನ್ನು ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ & ತಂಡದವರು ನಿರ್ಮಿಸುತ್ತಿದ್ದು, 16 ಜನರ ತಂಡ 3 ತಿಂಗಳ ಕಾಲ ಈ ಪ್ರತಿಮೆ ನಿರ್ಮಾಣ ಕೆಲಸ ಮಾಡಿದೆ.