ಈ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ವಿಫಲ! ಸಾಧ್ಯವಾದರೆ ನೀವು ಪತ್ತೆ ಹಚ್ಚುವಿರಾ?

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (ಆಪ್ಟಿಕಲ್ ಇಲ್ಯೂಶನ್) ಎಂದು ಕರೆಯುತ್ತೇವೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ನೀವು ಅರಣ್ಯ ಪ್ರದೇಶವನ್ನು ನೋಡಬಹುದು.
ಆದರೆ, ಆ ಫೋಟೋದ ಒಂದು ಭಾಗದಲ್ಲಿ ಚಿರತೆಯೊಂದು ಕುಳಿತು ವಿಶ್ರಾಂತಿ ಪಡೆಯುತ್ತಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಪ್ರಕೃತಿಯ ಚಿತ್ರಣದೊಂದಿಗೆ ಚಿರತೆಯು ಸಹ ಬೆರೆತು ಹೋಗಿದೆ. ಅಲ್ಲದೆ, ಫೋಟೋವನ್ನು ದೂರದಿಂದ ಸೆರೆಹಿಡಿಯಲಾಗಿರುವುದರಿಂದ ಗುರುತಿಸುವುದು ಕೊಂಚ ಕಷ್ಟವೇ, ಹಾಗಂದ ಮಾತ್ರಕ್ಕೆ ಗುರುತೇ ಹಿಡಿಲು ಆಗುವುದಿಲ್ಲ ಅಂತಲ್ಲ, ನಿಮ್ಮ ಕಣ್ಣು ಮತ್ತು ತಲೆಗೆ ಸ್ವಲ್ಪ ಕೆಲಸ ಕೊಟ್ಟರೆ ಪತ್ತೆಹಚ್ಚಬಹುದು, ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಚಿರತೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರುವಾ
ಶೇಕಡ 90 ಮಂದಿ ಈ ಟಾಸ್ಕ್ನಲ್ಲಿ ವಿಫಲವಾಗಿದ್ದಾರೆ. ಒಂದು ವೇಳೆ ನೀವು 10 ಸೆಕೆಂಡ್ ಸಮಯದಲ್ಲಿ ಚಿರತೆಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಚಿರತೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್)