ದಾಖಲೆ..ದಾಖಲೆ.. ಬರೀ ದಾಖಲೆ: ಬುಕ್‌ಮೈ ಶೋ, IMDb ರೇಟಿಂಗ್‌ನಲ್ಲೂ 'ಕಾಂತಾರ' ಭಾರತದಲ್ಲೇ ನಂಬರ್ 1

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಐದಾರು ಭಾಷೆಗಳಿಗೆ 'ಕಾಂತಾರ' ಸಿನಿಮಾ ಡಬ್ ಆಗಿ ರಿಲೀಸ್ ಆಗದೇ ಇರಬಹುದು. ಆದರೆ ದಾಖಲೆಗಳ ವಿಚಾರಕ್ಕೆ ಬಂದರೆ KGF- 2 ಸಿನಿಮಾ ರೇಂಜಿಗೆ ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೀತಿರೋ ಸಿನಿಮಾ, ಬುಕ್‌ಮೈ ಶೋ ರೇಟಿಂಗ್, IMDB ರೇಟಿಂಗ್‌ನಲ್ಲೂ ಮೊದಲ ಸ್ಥಾನದಲ್ಲಿದೆ.
ರಿಷಬ್ ಶೆಟ್ಟಿ ನಿಜಕ್ಕೂ ಜಾದೂ ಮಾಡಿದ್ದಾರೆ. ನಿರ್ದೇಶಕರಾಗಿ ನಟರಾಗಿ ಸೂಪರ್ ಸಕ್ಸಸ್ ಕಂಡಿದ್ದಾರೆ. ನಮ್ಮ ಕರಾವಳಿ ಮಣ್ಣಿನ ಕಥೆಯನ್ನು ತೆರೆಮೇಲೆ ಕಟ್ಟಿಕೊಟ್ಟು ಇಡೀ ಭಾರತೀಯ ಚಿತ್ರರಂಗವೇ ಇತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಸಿನಿಮಾವನ್ನು ಕನ್ನಡದಲ್ಲೇ ವಿಶ್ವದಾದ್ಯಂತ ನೋಡುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿನಿಮಾ ಕಳೆದ 4 ದಿನಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮನತುಂಬಿ ಕೊಂಡಾಡುತ್ತಿದ್ದಾರೆ.
ಯಾವುದೇ ಸೂಪರ್ ಸಿನಿಮಾ ಆದರೂ ಒಬ್ಬರಾದ್ರು, ನೆಗೆಟಿವ್ ಕಾಮೆಂಟ್ ಮಾಡ್ತಾರೆ. ಆದರೆ 'ಕಾಂತಾರ' ಚಿತ್ರ ನೋಡಿದ ಯಾರೊಬ್ಬರಿಗೂ ನೆಗೆಟಿವ್ ಮಾತನಾಡುವುದುಕ್ಕೆ ಅವಕಾಶ ಕೊಟ್ಟಿಲ್ಲ ರಿಷಬ್ ಶೆಟ್ಟಿ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಪರಭಾಷಿಕರು ಕನ್ನಡದಲ್ಲೇ ಸಿನಿಮಾ ನೋಡಿ ಹುಬ್ಬೇರಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಹ್ಯಾಟ್ಸಾಪ್ ಹೇಳ್ತಿದ್ದಾರೆ. ಬುಕ್‌ಮೈ ಶೋನಲ್ಲಿ 99% ರೇಟಿಂಗ್
ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರಕ್ಕೆ ತಮ್ಮ ರೇಟಿಂಗ್ ಕೊಡುವ ಅವಕಾಶ ಇದೆ. ಇದೇ ರೇಟಿಂಗ್ ನೋಡಿಕೊಂಡು ಸಾಕಷ್ಟು ಜನ ಸಿನಿಮಾ ನೋಡಲು ಬರ್ತಾರೆ. 'ಕಾಂತಾರ' 16 ಸಾವಿರಕ್ಕೂ ಅಧಿಕ ಜನ ವೋಟ್ ಮಾಡಿದ್ದು, 99% ರೇಟಿಂಗ್ ಸಿಕ್ಕಿದೆ. ಭಾರತೀಯ ಚಿತ್ರರಂಗದಲ್ಲೇ ಇಂತಾದೊಂದು ದಾಖಲೆ ಮಾಡಿರುವ ಮೊದಲ ಸಿನಿಮಾ 'ಕಾಂತಾರ' ಎನ್ನಲಾಗ್ತಿದೆ.
ಮಂಕಾದ 'ಪೊನ್ನಿಯಿನ್ ಸೆಲ್ವನ್', 'ವಿಕ್ರಂವೇದ'
'ಕಾಂತಾರ' ಜೊತೆಗೆ ತಮಿಳಿನ 'ಪೊನ್ನಿಯಿನ್ ಸೆಲ್ವನ್' ಬಾಲಿವುಡ್‌ನ 'ವಿಕ್ರಂವೇದ' ಸಿನಿಮಾಗಳು ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಬಜೆಟ್, ಕ್ಯಾನ್ವಾಸ್, ಮಾರ್ಕೆಟ್ ಲೆಕ್ಕಾಚಾರದಲ್ಲಿ ಈ ಎರಡು ಸಿನಿಮಾಗಳು 'ಕಾಂತಾರ'ಗಿಂತ ದೊಡ್ಡ ಸಿನಿಮಾಗಳು. ಆದರೆ ಕಂಟೆಂಟ್ ಮತ್ತು ಕ್ವಾಲಿಟಿ ವಿಚಾರದಲ್ಲಿ 'ಕಾಂತಾರ' ಮೊದಲ ಸ್ಥಾನದಲ್ಲಿದೆ. ಬುಕ್‌ಮೈ ಶೋನಲ್ಲಿ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ 91 ಸಾವಿರ ಜನ ವೋಟ್ ಮಾಡಿದ್ದು 87% ರೇಟಿಂಗ್ ಅಷ್ಟೇ ಸಿಕ್ಕಿದೆ. 'ವಿಕ್ರಂವೇದ' ಸಿಕ್ಕಿರುವುದು ಕೂಡ 87% ರೇಟಿಂಗ್ ಮಾತ್ರ. 99% ರೇಟಿಂಗ್ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಚಿತ್ರಕ್ಕೂ ಸಿಕ್ಕಿಲ್ಲ ಎನ್ನಲಾಗ್ತಿದೆ.
IMDb ರೇಟಿಂಗ್‌ನಲ್ಲೂ 'ಕಾಂತಾರ' ನಂಬರ್ 1
ಬರೀ ಬುಕ್ ಮೈಶೋ ಮಾತ್ರವಲ್ಲ, IMDb ರೇಟಿಂಗ್‌ನಲ್ಲೂ 'ಕಾಂತಾರ' ನಂಬರ್ ವನ್ ಸ್ಥಾನದಲ್ಲಿದೆ. 9.7 ರೇಟಿಂಗ್‌ನಿಂದ 'ಕಾಂತಾರ' ದಾಖಲೆ ಬರೆದಿದೆ. 'ವಿಕ್ರಂವೇದ' ಚಿತ್ರಕ್ಕೆ 7.2 ಹಾಗೂ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ 8.6 ರೇಟಿಂಗ್ ಮಾತ್ರ ಸಿಕ್ಕಿದೆ. ಬುಕ್‌ಮೈ ಶೋ ಹಾಗೂ IMDbಯಲ್ಲಿ 'ಕಾಂತಾರ' ಚಿತ್ರಕ್ಕೆ ಸಿಕ್ಕಿರುವ ರೇಟಿಂಗ್ ನೋಡಿ ಪರಭಾಷಿಕರು ಹುಬ್ಬೇರಿಸಿದ್ದಾರೆ. ಇದ್ಯಾವ ಸಿನಿಮಾ ಗುರೂ, ಈ ಪಾಟಿ ರೇಟಿಂಗ್ ಇದೆ. ಸಿನಿಮಾ ನೋಡಲೇ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಬಾಕ್ಸಾಫೀಸ್‌ನಲ್ಲಿ 20 ಕೋಟಿ ದಾಟಿದ ಕಲೆಕ್ಷನ್ 'ಕಾಂತಾರ' ಚಿತ್ರ ಬಾಕ್ಸಾಫೀಸ್‌ನಲ್ಲೂ ಸಖತ್ ಸದ್ದು ಮಾಡ್ತಿದೆ. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ. 4 ದಿನಕ್ಕೆ ಸಿನಿಮಾ ಕಲೆಕ್ಷನ್ 20 ಕೋಟಿ ದಾಟಿರುವ ಅಂದಾಜಿದೆ. ಆಯುಧಪೂಜೆ ಹಾಗೂ ವಿಜಯದಶಮಿ ರಜೆಯ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸುಳಿವು ಸಿಕ್ತಿದೆ.