ಮೂವರು ಹಿಂದೂ ಮಕ್ಕಳನ್ನ ಬೆಳೆಸಿದ್ರಂತೆ ಈ ಮುಸ್ಲಿಂ ಮಹಿಳೆ! ಸಿನೆಮಾ ಆಗಿದೆ ಇವರ ಕಥೆ

ಮೂವರು ಹಿಂದೂ ಮಕ್ಕಳನ್ನ ಬೆಳೆಸಿದ್ರಂತೆ ಈ ಮುಸ್ಲಿಂ ಮಹಿಳೆ! ಸಿನೆಮಾ ಆಗಿದೆ ಇವರ ಕಥೆ
ಜಾತಿ-ಮತಗಳಿಗಿಂತಲೂ ಮನುಷ್ಯತ್ವ ದೊಡ್ಡದು ಅನ್ನೋ ಮಾತು ನಾವು ಅನೇಕ ಬಾರಿ ಕೇಳಿರುತ್ತೇವೆ.
ಆದರೆ ಈ ಮಾತಿನ ಅನುಷ್ಠಾನ ಅಂತ ಬಂದಾಗ ತುಂಬಾನೇ ಎಂದರೆ ಬೆರಳೆಣಿಕೆಯಷ್ಟು ಜನರು (People) ಮಾತ್ರ ಇದನ್ನು ಅನುಕರಣೆಗೆ ತಂದಿರುತ್ತಾರೆ ಅಂತ ಹೇಳಬಹುದು.
ಹೀಗೆ ಈ ಮಾತನ್ನು ಎಂದರೆ ಜಾತಿ ಮತ ಅನ್ನೋದನ್ನ ಮೀರಿ ಮಾನವೀಯತೆಯನ್ನು ಮೆರೆದಿರುವ ಒಬ್ಬ ಮಹಿಳೆಯ (Women) ಕಥೆಯನ್ನು ಇಲ್ಲಿ ಹೇಳುತ್ತೇವೆ ನೋಡಿ.
ಕೇರಳದ (Kerala) ಮುಸ್ಲಿಂ ಮಹಿಳೆಯೊಬ್ಬರು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಮೂವರು ಹಿಂದೂ ಮಕ್ಕಳನ್ನು (Children) ದೊಡ್ಡವರಾಗಿ ಬೆಳೆಸಿದ್ದಾರಂತೆ.



ರಾಜಕಾರಿಣಿ ಶಶಿ ತರೂರ್ ಅವರು ಇತ್ತೀಚೆಗೆ ಕೇರಳದ ಮುಸ್ಲಿಂ ಮಹಿಳೆಯೊಬ್ಬಳು ಧಾರ್ಮಿಕ ಅಡೆತಡೆಗಳನ್ನು ಮೀರಿ ಮೂರು ಹಿಂದೂ ಮಕ್ಕಳನ್ನು ಬೆಳೆಸಿದ ಕಥೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಆದರೆ ಅಷ್ಟೆ ಅಲ್ಲದೇ ಜನವರಿ 9 ರಂದು ಕೊಚ್ಚಿಯ ಎಡಪಲ್ಲಿಯ ವನಿತಾ ಚಿತ್ರಮಂದಿರದಲ್ಲಿ ಪ್ರಥಮ ಪ್ರದರ್ಶನಗೊಂಡ ಚಲನಚಿತ್ರಕ್ಕೆ ಈ ಕಥೆ ಈಗ ಸ್ಫೂರ್ತಿ ನೀಡಿದೆ ಅಂತ ಹೇಳಬಹುದು.

ತೆನ್ನಡನ್ ಸುಬೈದಾ ಮತ್ತು ಅಬ್ದುಲ್ ಅಜೀಜ್ ಹಾಜಿ (ಮುಸ್ಲಿಂ ದಂಪತಿ) ಅವರ ಹೃದಯಸ್ಪರ್ಶಿ ಕಥೆಯನ್ನು ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಪರವೂರ್ ಅವರು ತೆರೆಗೆ ಅಳವಡಿಸಿಕೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಈ ಚಿತ್ರಕ್ಕೆ ಸುಬೈದಾ ಅವರ ದತ್ತು ಪುತ್ರ ಶ್ರೀಧರನ್ ಅವರ ಹೆಸರನ್ನು ಇಡಲಾಗಿದ್ದು, ಇದನ್ನು 'ಎನ್ನು ಸ್ವಾಂತಮ್ ಶ್ರೀಧರನ್' ಎಂದರೆ ಪ್ರೀತಿಯಿಂದ ಶ್ರೀಧರನ್ ಎಂದು ಅರ್ಥ ಬರುವಂತೆ ಹೆಸರಿಡಲಾಗಿದೆ.


ಕೇರಳದ ಮಲಪ್ಪುರಂ ಜಿಲ್ಲೆಯ ಕಾಲಿಕಾವು ಗ್ರಾಮದ ಮುಸ್ಲಿಂ ದಂಪತಿಗಳು ತಮ್ಮ ಮನೆಕೆಲಸದ ಹಿಂದೂ ಮಹಿಳೆಯ ಸಾವಿನ ನಂತರ ಮೂವರು ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸಿದ ಕಥೆ ಇದಾಗಿದೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚಕ್ಕಿ ಎಂಬ ಮಹಿಳೆ ನಿಧನರಾದ ದಿನ ಸುಬೈದಾ ಮನೆ ಕೆಲಸದಾಕೆಯ ಮಕ್ಕಳಾದ ಶ್ರೀಧರನ್, ರಮಣಿ ಮತ್ತು ಲೀಲಾ ಅವರನ್ನು ನೋಡಿಕೊಳ್ಳಲು ನಿರ್ಧರಿಸಿದರು.

ಅಂದಿನಿಂದ, ಅವರು ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಅವರನ್ನು ಎಂದಿಗೂ ಒತ್ತಾಯಿಸಲಿಲ್ಲ ಮತ್ತು ಯಾವುದೇ ಅಡೆತಡೆಯಿಲ್ಲದೆ ಮಕ್ಕಳಿಗೆ ಎಲ್ಲಾ ಹಿಂದೂ ಆಚರಣೆಗಳನ್ನು ಆಚರಿಸಲು ಅವಕಾಶ ಮಾಡಿಕೊಟ್ಟರು.

ತಮ್ಮ ಮುಸ್ಲಿಂ ತಾಯಿಯ ಬಗ್ಗೆ ಏನಂದ್ರು ಶ್ರೀಧರನ್?

ತಮ್ಮ ಮುಸ್ಲಿಂ ತಾಯಿ ಸುಬೈದಾ ಅವರ ದುರಂತ ಸಾವಿನ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡ ನಂತರ ಶ್ರೀಧರನ್ 2019 ರಲ್ಲಿ ಸುಬೈದಾ ಅವರ ಕಥೆಯನ್ನು ಜಗತ್ತಿಗೆ ಪರಿಚಯಿಸಿದರು.
ದತ್ತು ಪಡೆದ ತಾಯಿ ಎಂದಿಗೂ ಒಬ್ಬರ ನಿಜವಾದ ತಾಯಿಗೆ ಹೊಂದಿಕೆಯಾಗುವುದಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಅವಳು ಎಂದಿಗೂ ನಮಗೆ 'ದತ್ತು ತಾಯಿ' ಅಂತ ಅನ್ನಿಸಲೇ ಇಲ್ಲ, ಅವಳು ನಿಜವಾಗಿಯೂ ನಮ್ಮ ತಾಯಿಯಾಗಿದ್ದಳು" ಎಂದು ಅವರು ಬರೆದಿದ್ದಾರೆ.



ನಿರ್ದೇಶಕ ಸಿದ್ದಿಕ್ ಪರವೂರ್ ಅವರು ಸಾಮಾಜಿಕ ಕಾರ್ಯಕರ್ತರ ಮೂಲಕ ಸುಬೈದಾ ಅವರ ಬಗ್ಗೆ ಮೊದಲ ಬಾರಿಗೆ ಕೇಳಿ ತಿಳಿದುಕೊಂಡು ಅವರ ಕಥೆಯಿಂದ ತುಂಬಾನೇ ಪ್ರಭಾವಿತರಾದರು ಎಂದು ಬಹಿರಂಗಪಡಿಸಿದ್ದಾರೆ.
ಪರವೂರ್ ಅವರು ಜನರು ತುಂಬಾ ಒಳ್ಳೆಯವರು ಆದರೆ ಅವರಿಗೆ ಆ ಒಳ್ಳೆಯತನವನ್ನು ನೆನಪಿಸಲು ಈ ರೀತಿ ಕಥೆಗಳನ್ನು ಹೇಳಲೇ ಬೇಕಾಗುತ್ತದೆ ಎಂದಿದ್ದಾರೆ.