545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು

ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ( 545 PSI Recruitment Scam ) ಭಾಗಿಯಾಗಿ, ಬಂಧಿತರಾಗಿದ್ದಂತ ಪ್ರಮುಖ ಆರೋಪಿಗಳಿಗೆ ಇಂದು ಕಲಬುರ್ಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇಂದು ಕಲಬುರ್ಗಿ ಹೈಕೋರ್ಟ್ ಗೆ ಆರೋಪಿಗಳಾದಂತ ರುದ್ರಗೌಡ ಪಾಟೀಲ್ ಹಾಗೂ ಮಹಾಂತೇಶ್ ಪಾಟೀಲ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದಂತ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.