ಗಣಪತಿ ಹಬ್ಬ ನಿರ್ಬಂಧಿಸಲು ಬಿಡುವುದಿಲ್ಲ: ಶಾಸಕ ಯತ್ನಾಳ
ಗಣಪತಿ ಹಬ್ಬ ನಿರ್ಬಂಧಿಸಲು ಬಿಡುವುದಿಲ್ಲ: ಶಾಸಕ ಯತ್ನಾಳ
ವಿಜಯಪುರ: 'ಕೋವಿಡ್ ನೆಪದಲ್ಲಿ ಗಣಪತಿ ಹಬ್ಬ, ಹಿಂದೂ ಆಚರಣೆಗಳ ಮೇಲೆ ನಿರ್ಬಂಧ ಹೇರಿದರೆ ವಿಜಯಪುರದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ೫೦ ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
'ಭಾಳಾದ್ರ, ನನಗೆ ಗುಂಡು ಹೊಡೆಯಬಹುದು. ಹಾಗಾದರೆ, ಇಡೀ ಕರ್ನಾಟಕದ ತುಂಬಾ ಬೆಂಕಿ ಹತ್ತೈತಿ. ಸತ್ತರೂ ಹೆಸರು ತೆಗೆದುಕೊಂಡು ಹೋಗುವೆ' ಎಂದು ಹೇಳಿದರು.
'ಗಣಪತಿ ಹಬ್ಬ, ದೀಪಾವಳಿ, ಸಂಕ್ರಾAತಿ ಮಾಡಬೇಡಿ ಎಂದು ನೀವೇ ಹೇಳಿದರೆ ಹೇಗೆ? ಉಳಿದವರಿಗೆ ಅನುವು ಮಾಡಿಕೊಟ್ಟು, ನಮಗೆ ಬೇಡ ಎಂದರೆ ನಡೆಯುವುದಿಲ್ಲ ಎಂದು ಬೊಮ್ಮಾಯಿ ಅವರಿಗೆ ಸ್ಪಷ್ಟಪಡಿಸಿದ್ದೇನೆ' ಎಂದರು.
'ಗಣಪತಿ ಹಬ್ಬದ ಆಚರಣೆಗೆ ಯಾರೂ ತೊಂದರೆ ಮಾಡಬಾರದು ಎಂದು ಸಿಎಂ ಆದೇಶಿಸಿದ್ದಾರೆ. ಹಬ್ಬವನ್ನಾಚರಿಸಲು ಯಾರೂ ಹೆದರಬೇಕಾಗಿಲ್ಲ' ಎಂದು ಹೇಳಿದರು.