ರಾಜ್ಯದ ʼರಸ್ತೆಗಳಲ್ಲಿ ಪ್ರತಿಮೆʼಗಳ ಸ್ಥಾಪನೆ ಮಾಡುವಂತಿಲ್ಲ: ರಾಜ್ಯ ಹೈಕೋರ್ಟ್‌ ಮಹತ್ವದ ಆದೇಶ

ರಾಜ್ಯದ ʼರಸ್ತೆಗಳಲ್ಲಿ ಪ್ರತಿಮೆʼಗಳ ಸ್ಥಾಪನೆ ಮಾಡುವಂತಿಲ್ಲ: ರಾಜ್ಯ ಹೈಕೋರ್ಟ್‌ ಮಹತ್ವದ ಆದೇಶ

ಡಿಜಿಟಲ್‌ ಡೆಸ್ಕ್:‌ ರಾಜ್ಯ ಹೈಕೋರ್ಟ್, ರಾಜ್ಯಾದ್ಯಂತ ರಸ್ತೆಗಳಲ್ಲಿ ಪ್ರತಿಮೆಗಳ ಸ್ಥಾಪನೆ ನಿರ್ಬಂಧಕ್ಕೆ ಆದೇಶ ನೀಡಿದ್ದು, ಸುಪ್ರೀಂಕೋರ್ಟ್‌ ಆದೇಶ ಆಧರಿಸಿ‌ ಹೈಕೋರ್ಟ್ ಈ ಸೂಚನೆ ನೀಡಿದೆ.

ಮೈಸೂರಿನ ಗನ್‌ ಹೌಸ್‌ ಸರ್ಕಲ್‌ನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಪ್ರತಿಮೆ ಸ್ಥಾಪನೆ ಪ್ರಶ್ನಿಸಿ ಕ್ಷತ್ರಿಯ ಮಹಾಸಭಾ ಪಿಐಎಲ್‌ ಸಲ್ಲಿಸಿತ್ತು. ಸಧ್ಯ ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ರಾಜ್ಯಾದ್ಯಂತ ರಸ್ತೆಗಳಲ್ಲಿ ಪ್ರತಿಮೆಗಳ ಸ್ಥಾಪನೆ ನಿರ್ಬಂಧಕ್ಕೆ ಆದೇಶ ನೀಡಿದೆ. ಅದ್ರಂತೆ, ಪ್ರತಿಮೆ ಸ್ಥಾಪಿಸುವ ಮೈಸೂರು ಪಾಲಿಕೆ ನಿರ್ಣಯ ರದ್ದು ಪಡೆಸಿ ಆದೇಶವನ್ನ ಹೈಕೋರ್ಟ್‌ ವಿಭಾಗೀಯ ಪೀಠ ಹೊರಡಿಸಿದೆ.

ಅಂದ್ಹಾಗೆ, ಈ ಮೈಸೂರಿನ ಗನ್‌ ಹೌಸ್‌ ಸರ್ಕಲ್‌ ರಸ್ತೆಯ ಮಧ್ಯದಲ್ಲಿದ್ದು, ಇಲ್ಲಿ ಪ್ರತಿಮೆ ಸ್ಥಾಪನೆಗೆ ಸರ್ಕಾರ, ಮೈಸೂರು ಪಾಲಿಕೆ ಒಪ್ಪಿಗೆ ನೀಡಿದೆ. ಇನ್ನು ಸುಪ್ರೀಂಕೋರ್ಟ್‌ ಪ್ರತಿಮೆ ಸ್ಥಾಪನೆಗೆ ನಿರ್ಬಂಧ ಹೇರಿದೆ. ಯಾವುದೇ ಅನುಮತಿ ನೀಡದಂತೆ ಸರ್ಕಾರಗಳಿಗೆ ಸೂಚಿಸಿದೆ. ಅದ್ರಂತೆ, ಸುಪ್ರೀಂಕೋರ್ಟ್‌ ಆದೇಶ ಪಾಲನೆಗೆ ಹೈಕೋರ್ಟ್‌ ಸೂಚನೆ ನೀಡಿದೆ.