ಗೋಡೆ ಕೊರೆದು ಬ್ಯಾಂಕ್ ಕಳ್ಳತನಕ್ಕೆ ಯತ್ನ...ಸಿಸಿಟಿವಿಯಲ್ಲಿ ಖದೀಮರ ಕೈಚಳಕ ಸೆರೆ... | Dharwad |
ಕೆವಿಜಿ ಬ್ಯಾಂಕ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಕ್ಯಾಶ್ ಕ್ಯಾಬಿನ್ ಹತ್ತಿರದ ಗೋಡೆ ಕೊರೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ದಾರೆ.ಗೋಡೆ ಕೊರೆದು ಒಳಬಂದು ಕಳ್ಳರು ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ಮುರಿಯಲು ಯತ್ನಿಸಿ, ವಿಫಲರಾಗಿದ್ದಾರೆ. ನಂತರ ಬ್ಯಾಂಕ್ನಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಎನ್ನೊ ಸಿಗದೆ ಅಲ್ಲಿಂದ ವಾಪಸಾಗಿದ್ದಾರೆ. ಖದೀಮರ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜೊತೆಗೆ ಸಿಸಿಟಿವಿ ಕಂಡೊಡನೆ ಕಳ್ಳರು ನಿಷ್ಕ್ರಿಯಗೊಳಿಸಿದ್ದಾರೆ. ಕಳ್ಳತನಕ್ಕೆ ಯತ್ನ ಪ್ರಕರಣ ಕುರಿತು ಕೆವಿಜಿ ಬ್ಯಾಂಕ್ ಮ್ಯಾನೇಜರ್ ಶರತ್ ನಾಯಕ್ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕೆಲ ತಿಂಗಳ ಹಿಂದೆ ಕಲಘಟಗಿಯಲ್ಲಿ ಹಾಡಹಗಲೇ ಮೂರು ಮನೆಗಳಲ್ಲಿ ಕಳ್ಳರು ಚಿನ್ನಾಭರಣ ದೋಚಿದ್ದರು. ಇದೀಗ ಬ್ಯಾಂಕ್ ಕಳ್ಳತನ ಯತ್ನ ನಡೆದಿರುವುದು ಕಲಘಟಗಿ ತಾಲೂಕಿನ ಜನರನ್ನು ಬೆಚ್ಚಿಬೀಳಿಸಿದೆ