ದೇವನಹಳ್ಳಿಯಲ್ಲಿ ವಾಟರ್‌ ಹೀಟರ್ ನಿಂದ ವಿದ್ಯುತ್‌ ತಗಲಿ ತಾಯಿ, ಮಗು ಸಾವು

ದೇವನಹಳ್ಳಿಯಲ್ಲಿ ವಾಟರ್‌ ಹೀಟರ್ ನಿಂದ ವಿದ್ಯುತ್‌ ತಗಲಿ ತಾಯಿ, ಮಗು ಸಾವು

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ವಾಟರ್‌ ಹೀಟರ್‌ನಿಂದ ವಿದ್ಯುತ್‌ ತಗಲಿ ತಾಯಿ, ಮಗು ಮೃತಪಟ್ಟ ಘಟನೆ ನಡೆದಿದೆ.

ರಾಯಚೂರು ಮೂಲದ ತಾಯಿ ಜ್ಯೋತಿ, ಮಗ ಜಯಾನಂದ್ ಮೃತ ದುರ್ದೈವಿಗಳು.

ಜ್ಯೋತಿ ಅವರು ಶೌಚಾಲಯದಲ್ಲಿ ನೀರು ಕಾಯಿಸಲು ಹೀಟರ್ ಹಾಕಿದ್ದರು. ಈ ವೇಳೆ ಶೌಚಾಲಯಕ್ಕೆ ಬಾಲಕ ಹೋಗಿದ್ದು ಹೀಟರನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ. ಆಗ ಕರೆಂಟ್ ಶಾಕ್ ಹೊಡೆದಿದೆ. ಶಾಕ್​ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್​ ತಗಲಿ ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ. ದಂಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.