ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ಗತ್ತಿನ ಎರಡನೇ ವ್ಯಕ್ತಿ ಎಂದು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ಮಹಿಳೆಯೊಬ್ಬರು ಸುದ್ದಿ ಮಾಡಿದ್ದಾರೆ.

'ಎಸ್ಪರಂಜ಼ಾ ಪೇಷೆಂಟ್' ಎಂದು ಹುಸಿನಾಮದಿಂದ ಕರೆಯಲಾಗುವ ಈ ಮಹಿಳೆಗೆ ಎಚ್‌ಐವಿಯ ಯಾವುದೇ ರೋಗಲಕ್ಷಣಗಳು ಕಂಡು ಬರುತ್ತಿರಲಿಲ್ಲ.

ಸೋಂಕಿನಿಂದ ವಾಸಿಯಾಗಲು ಈಕೆ ಸ್ಟೆಂ ಸೆಲ್ ಕಸಿಯನ್ನೂ ಸಹ ಮಾಡಿಸಿಕೊಂಡಿಲ್ಲ.

ಅರ್ಜೆಂಟೀನಾದ ಈಕೆಗೆ 2013ರಲ್ಲಿ ಎಚ್‌ಐವಿ ಇರುವುದು ಖಾತ್ರಿಯಾಗಿದೆ. ಮುಂದಿನ ಎಂಟು ವರ್ಷಗಳ ಕಾಲ ನಿರಂತರ ಚೆಕಪ್‌ಗಳಿಗೆ ಒಳಗಾದ ಈಕೆಗೆ ಎಚ್‌ಐವಿಯ ಸೋಂಕಿರುವ ಯಾವುದೇ ಲಕ್ಷಣಗಳು ಮೇಲುನೋಟಕ್ಕೆ ಕಂಡು ಬರುತ್ತಿರಲಿಲ್ಲ. ಎಚ್‌ಐವಿಯು ಏಡ್ಸ್‌ ರೋಗಕ್ಕೆ ಕಾರಣವಾಗುವ ವೈರಸ್ ಆಗಿದೆ.

ಈ ಬಗ್ಗೆ ಮಾತನಾಡಿದ ಬ್ಯೂನಸ್ ಐರಿಸ್ ವಿವಿಯಲ್ಲಿ ಎಚ್‌ಐವಿ ಸಂಶೋಧಕಿ ಆಗಿರುವ ನಟಾಲಿಯಾ ಲೌಫರ್‌, "ಎಚ್‌ಐವಿ ವಾಸಿ ಮಾಡಲು ನಡೆಸುತ್ತಿರುವ ಅಧ್ಯಯನದಲ್ಲಿ ಇದೊಂದು ದೊಡ್ಡ ಬೆಳವಣಿಗೆಯಾಗಿದೆ. ಡಯಗ್ನೋಸಿಸ್ ಮಾಡಿದಾಗ ಬಂದ ಫಲಿತಾಂಶದಿಂದ ಆಕೆ ನಮ್ಮೆಲ್ಲರನ್ನೂ ಚಕಿತಗೊಳಿಸಿದ್ದಾರೆ. ಎಚ್‌ಐವಿ ಪರೀಕ್ಷೆಯಲ್ಲಿ ಆಕೆ ಪಾಸಿಟಿವ್ ಕಂಡುಬಂದಿದ್ದರೂ ಸಹ ವೈರಾಣುಗಳ ಮಟ್ಟವು ಪತ್ತೆ ಮಾಡಲಾಗಲಿಲ್ಲ. ಇದೇ ಮುಂದುವರೆದು ಕಾಲ ಕಳೆದಂತೆ ಆಕೆ ಗುಣಮುಖಳಾಗಿದ್ದಾಳೆ. 

'ಎಲೈಟ್ ಕಂಟ್ರೋಲರ್ಸ್' ಎಂಬ ವರ್ಗದಲ್ಲಿ ಕಂಡು ಬರುವ ಈ ಮಹಿಳೆ, ಈ ಅತ್ಯಪರೂಪದ ವರ್ಗದಲ್ಲಿರುವ ಕಾರಣ ಯಾವುದೇ ಕಸಿ ಅಥವಾ ಮದ್ದುಗಳ ಚಿಕಿತ್ಸೆಗಳ ನೆರವಿಲ್ಲದೇ ವೈರಾಣುವಿನಿಂದ ಪಾರಾಗಿ ಬರುವ ಸಹಜ ಮಾರ್ಗಗಳನ್ನು ಆಕೆಯ ದೇಹವೇ ಕಂಡುಕೊಂಡಿದೆ.