ಮಾತೃ ಪಕ್ಷಕ್ಕೆ ಮರಳಿದ ಭಾವನಾ ರಾಮಣ್ಣ: ಕಮಲ ತೊರೆದು 'ಕೈ' ಹಿಡಿದ ನಟಿ!

ಬೆಂಗಳೂರು: ನಟಿ ಭಾವನಾ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸರ್ಜೇವಾಲ, ಕಾಂಗ್ರೆಸ್‌ನ ಮಾಜಿ ಕಾರ್ಯಕರ್ತೆ ಹಾಗೂ ನಟಿ ಭಾವನಾ ರಾಮಣ್ಣ ಅವರು ನನ್ನನ್ನು ಭೇಟಿಯಾದರು.
ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪಕ್ಷವು ಪ್ರಾಬಲ್ಯ ಸಾಧಿಸಲಿದೆ ಎಂದು ನಾನು ಭಾವಿಸಿದ್ದೇನೆ. ಭಾವನಾ ಅವರಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿಯೇ ಇದ್ದ ಭಾವನಾ 2018ರ ಮೇ 10ರಂದು ಬಿಜೆಪಿ ಸೇರಿದ್ದರು. ಖಕಳೆದ ವಿಧಾನಸಭಾ ಚುನಾವಣೆ ವೇಳೆ ಭಾವನಾ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ನಿರಾಕರಿಸಿತ್ತು. ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಸಭೆಯಿಂದ ಹೊರ ನಡೆದಿದ್ದರು.
ಅದಾದ ಮೇಲೆ ಕೈ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಿರು. ಬಿಜೆಪಿ ಪರ ಹಲವು ಚುನಾವಣಾ ಕ್ಯಾಂಪೇನ್ ನಲ್ಲಿ ಕಾಣಿಸಿಕೊಂಡು ಮತಯಾಚನೆ ಮಾಡಿದ್ದರು.