ಬಿಜೆಪಿ ಅಭ್ಯರ್ಥಿ ಪರ ವಿಜಯೇಂದ್ರ ಭರ್ಜರಿ ಪ್ರಚಾರ

ಈಗಾಗಲೇ ಹಾನಗಲ್ ಬೈ ಇಲೆಕ್ಷನ್ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಅದ್ರಂತೆ ತಮ್ಮ ಬಿಜೆಪಿ ಅಭ್ಯರ್ಥಿ ಪರ ಬಿ ಎಸ್ ವಿಜಯೇಂದ್ರ ಅವರು ಹಾನಗಲ್ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಭರ್ಜರಿಯಾಗಿ ಮತ ಪ್ರಚಾರ ನಡೆಸಿದ್ರು. ಹಾನಗಲ್ ಕ್ಷೇತ್ರದ ಬೀದಿ ಬೀದಿಗಳಲ್ಲಿ ವಾಹನದ ಮೂಲಕ ಸಂಚರಿಸಿ, ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂದು ಮತದಾರ ಪ್ರಭುಗಳಿಗೆ ಮನವಿ ಮಾಡಿಕೊಂಡ್ರು. ಅಲ್ಲದೇ ಇಂದು ಬಹಿರಂಗ ಪ್ರಚಾರ ಅಂತಿಮವಾಗಿದ್ದು. ಅದ್ರಂತೆ ಬಿಜೆಪಿ ಕಾರ್ಯಕರ್ತರು ವಿಜಯಂದ್ರ ವಾಹನದ ಮುಂದೆ ಬಿಜೆಪಿ ಧ್ವಜವನ್ನು ಹಾರಿಸುತ್ತಾ ಪ್ರಚಾರ ನಡೆಸಿದ್ರು. ಹಾನಗಲ್ ಬಿಜೆಪಿ ಪರ ಪ್ರಚಾರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ರಾಜ್ಯ ನಿರ್ದೇಶಕ ಶರಣು ಅಂಗಡಿ ಸಾಥ್ ನೀಡಿದ್ರು.