ಸಂತೆ ಮಾರುಕಟ್ಟೆಗೂ ಪುನೀತ್ ರಾಜಕುಮಾರ್ ಹೆಸರು ನಾಮಕರಣ

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಸಂತೆ ಮಾರುಕಟ್ಟೆಗೆ ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಪಿಆರ್ಕೆ ಮಾರುಕಟ್ಟೆ ಎಂದು ಗ್ರಾಮಸ್ಥರು ನಾಮಕರಣ ಮಾಡಿದ ಮಾರುಕಟ್ಟೆಯನ್ನು ಶಾಸಕ ಬಸವರಾಜ್ ದಡೇಸಗೂರು ಅವರು ಪುನೀತ್ ಭಾವಚಿತ್ರ ಹಾರ ಹಾಕಿ ಉದ್ಘಾಟಿಸಿದರು.