ಕಾಂಗ್ರೆಸ್ಸಿನವರಿಗೆ ಮತ ಪೆಟ್ಟಿಗೆ ಮೂಲಕ ಉತ್ತರ ಕೊಡ್ತೇವೆ: ಸಚಿವ ಬಿಸಿ ಪಾಟೀಲ

ಜನ ಸ್ವರಾಜ್ ಯಾತ್ರೆ ಕಾಂಗ್ರೆಸ್ನವರನ್ನು ಕೇಳಿ ಮಾಡಬೇಕಿಲ್ಲ. ಕಾಂಗ್ರೆಸ್ಸಿನವರಿಗೆ ಮತ ಪೆಟ್ಟಿಗೆ ಮೂಲಕ ಉತ್ತರ ಕೊಡುತ್ತೇವೆ ಎಂದು ಮೇಕೆದಾಟು ಯೋಜನೆಯ ಕುರಿತು ನರಗುಂದ ಪಟ್ಟಣದಲ್ಲಿ ಸಚಿವ ಬಿಸಿ ಪಾಟೀಲ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆಯ ಕ್ರೆಡಿಟ್ ಬಿಜೆಪಿಯವರಿಗೆ ಹೋಗುತ್ತೆ ಎಂಬ ಕಾರಣಕ್ಕೆ ತೋರ್ಪಡೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಅಧಿಕಾರದಲ್ಲಿದ್ದಾಗ ಬಾಯಿ ಮುಚ್ಚಿಕೊಂಡು ಕುಳಿತು ಈಗ ಯಾಕೆ ಮಾತಾಡುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನವರ ಕೇಳಿ ನಾವು ಮಾಡಬೇಕಿಲ್ಲ ಎಂದರು.