ಜನರ ಮನಸ್ಸಿನಲ್ಲಿ ಸದಾ ಇದ್ದವರು ನಾವು, ಪಾಲಿಕೆಯ 6ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ನದಾಫ | Dharwad |
ಕಳೆದ ಎರಡು ಅವಧಿಗಳಲ್ಲಿ ಬಿಜೆಪಿ ಪಕ್ಷ ಪಾಲಿಕೆಯಲ್ಲಿ ಏನೂ ಮಾಡಿದೆ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಮಾಹಾನಗರವಾಗಿ ಅವಳಿನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಮ್ಮ ವಾರ್ಡಿನ್ ಜನತೆ ಜೊತೆಗೆ ಹಿಂದಿನಿಂದಲೂ ಉತ್ತಮವಾದ ಒಡನಾಟ ಹೊಂದಿದ್ದೇವೆ. ಸುಮಾರು ವರ್ಷಗಳಿಂದ ಜನರ ನಾಡ ಮಿಡಿತಗಳಿಗೆ ಸ್ಪಂದಿಸಿದಂತವರು ನಾವು, ಈ ವಿಚಾರವನ್ನು ಅರಿತು ಜನರೆ ನನ್ನ ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಮಾಡುತ್ತಾ ಬಂದಿದ್ದರು ಎಂದು ಪಾಲಿಕೆಯ 6ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಧೀಲಶಾಧ್ ಬೇಗಾಂ ನದಾಫ 9live ಜೊತೆ ಮನದಾಳದ ಹಂಚಿಕೊಂಡಿದ್ದಾರೆ. ಇನ್ನು ನಗರದ ತಮ್ಮ ವಾರ್ಡಿನಲ್ಲಿ ಇರುವ ಕಂಟಿಗಲ್ಲೆ, ಚಾವಸೆಗಲ್ಲೆ ಸೇರಿದಂತೆ ಮ್ಯಾದರ್ ಓಣಿಗಳಲ್ಲಿ ಈಗ ಪ್ರಚಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ವಿನಂತಿಸಿಕೊಳ್ಳಲಾಗುತ್ತಿದೆ. ನಮ್ಮ ವಾರ್ಡಿನ ಜನರ ಆಶೀರ್ವಾದ ಸದಾ ನಮ್ಮ ಮೇಲಿದೆ, ಆ ಉದ್ದೇಶದಿಂದ ನಮ್ಮ ಮತದಾರ ಪ್ರಭುಗಳಿಗೆ ಕುಡಿಯುವ ನೀರು, ಕಾಲುವೆ,ಚರಂಡಿ, ಬೀದಿ ದೀಪಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಒತ್ತು ನೀಡಲಾಗುವುದು. ಮಾದರಿ ವಾರ್ಡವನ್ನಾಗಿ ನಾವು ರೂಪಿಸುವುದಾಗಿ ಹೇಳಿಕೊಂಡಿದ್ದಾರೆ.