'ಕೇಂದ್ರ ಸರ್ಕಾರ'ದಿಂದ ಮಹತ್ವದ ನಿರ್ಧಾರ ; 'ಪಾಕಿಸ್ತಾನಿ ಹಿಂದೂ'ಗಳಿಗೆ ಖುಷಿ ವಿಚಾರ

'ಕೇಂದ್ರ ಸರ್ಕಾರ'ದಿಂದ ಮಹತ್ವದ ನಿರ್ಧಾರ ; 'ಪಾಕಿಸ್ತಾನಿ ಹಿಂದೂ'ಗಳಿಗೆ ಖುಷಿ ವಿಚಾರ

ವದೆಹಲಿ : ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಪಾಕಿಸ್ತಾನಿ ಹಿಂದೂಗಳ ಕೊನೆಯ ಆಸೆ ಈಡೇರಿಸಲು ಮುಂದಾಗಿದೆ. ವಾಸ್ತವವಾಗಿ, ಪಾಕಿಸ್ತಾನದಲ್ಲಿರುವ ಅನೇಕ ಹಿಂದೂಗಳ ಕೊನೆಯ ಆಸೆಯೆಂದ್ರೆ, ಅದು ಮರಣದ ನಂತ್ರ ತಮ್ಮ ಚಿತಾಭಸ್ಮವನ್ನ ಪವಿತ್ರ ನದಿ ಗಂಗಾದಲ್ಲಿ ವಿಸರ್ಜಿಸಬೇಕು ಅನ್ನೋದು.

ಆದ್ರೆ, ಅವರ ಕುಟುಂಬ ಸದಸ್ಯರಿಗೆ ಪಾಕಿಸ್ತಾನದಿಂದ ಚಿತಾಭಸ್ಮವನ್ನ ಭಾರತಕ್ಕೆ ತರುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಸರಕಾರ ಇದೀಗ ಇಂತಹದೊಂದು ಹೆಜ್ಜೆ ಇಟ್ಟಿದ್ದು, ಈ ಮೂಲಕ ಆ ಕುಟುಂಬಗಳೆಲ್ಲ ತಮ್ಮ ಜನರ ಅಸ್ಥಿಯೊಂದಿಗೆ ಉತ್ತರಾಖಂಡದ ಹರಿದ್ವಾರಕ್ಕೆ ಬಂದು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಸ್ಥಿಯನ್ನ ಪವಿತ್ರ ಗಂಗಾನದಿಯಲ್ಲಿ ಲೀನ ಮಾಡಬೋದು.

ನರೇಂದ್ರ ಮೋದಿ ಸರ್ಕಾರದ ಪ್ರಾಯೋಜಕತ್ವ ನೀತಿಯಲ್ಲಿ ತಿದ್ದುಪಡಿಯಾದ ನಂತ್ರ ಇದೇ ಮೊದಲ ಬಾರಿಗೆ 426 ಪಾಕಿಸ್ತಾನಿ ಹಿಂದೂಗಳ ಚಿತಾಭಸ್ಮವನ್ನ ಹರಿದ್ವಾರದಲ್ಲಿರುವ ಗಂಗಾ ನದಿಯಲ್ಲಿ ಅವರ ಕುಟುಂಬ ಸದಸ್ಯರು ವಿಸರ್ಜಿಸಲಿದ್ದಾರೆ. ಪ್ರಸ್ತುತ ಈ ಮೂಳೆಗಳನ್ನ ಕರಾಚಿ ಮತ್ತು ಇತರ ಸ್ಥಳಗಳ ಕೆಲವು ದೇವಾಲಯಗಳು ಮತ್ತು ಸ್ಮಶಾನ ಸ್ಥಳಗಳಲ್ಲಿ ಇರಿಸಲಾಗಿದೆ.