ಜ್ವರ, ನೆಗಡಿಗೆ ಆ್ಯಂಟಿಬಯೋಟಿಕ್ಸ್‌ ಬೇಡ; ಐಸಿಎಂಆರ್‌

ಜ್ವರ, ನೆಗಡಿಗೆ ಆ್ಯಂಟಿಬಯೋಟಿಕ್ಸ್‌ ಬೇಡ; ಐಸಿಎಂಆರ್‌

ಹೊಸದಿಲ್ಲಿ: ಶೀತ ನೆಗಡಿ, ಜ್ವರದಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ಆ್ಯಂಟಿಬಯೋಟಿಕ್‌ ನೀಡುವುದು ಇತ್ತೀಚೆಗೆ ಹೆಚ್ಚುತ್ತಿದೆ. ಇದರಿಂದ ದೀರ್ಘಾವಧಿಯಲ್ಲಿಆಗುವ ಪರಿಣಾಮ ದುಬಾರಿ. ಆದ್ದರಿಂದಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಆ್ಯಂಟಿಬಯೋಟಿಕ್‌ ಬಳಕೆಯಲ್ಲಿತೋರಬೇಕಾದ ವಿವೇಚನೆ ಕುರಿತು ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಪ್ರಯೋಗಾಲಯದ ಮಾದರಿ ಪಡೆಯದೇ ಕಣ್ಣುಮುಚ್ಚಿ ಆ್ಯಂಟಿಬಯೋಟಿಕ್ಸ್‌ ಬರೆಯುವುದು ತಪ್ಪು ಎಂದಿದೆ.