ಎರಡು ವರ್ಷದ ಬಳಿಕ ಕುಕ್ಕೆಯಲ್ಲಿ ಎಡೆಸ್ನಾನ ಪುನಾರಂಭ

ಎರಡು ವರ್ಷದ ಬಳಿಕ ಕುಕ್ಕೆಯಲ್ಲಿ ಎಡೆಸ್ನಾನ ಪುನಾರಂಭ

ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಎಡೆಸ್ನಾನವನ್ನು ನಿನ್ನೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನ ಅಡಳಿತ ಸಮಿಯಿಂದ ಪುನಾರಂಭ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಹಿನ್ನೆಲೆ ಎಡೆಸ್ನಾನ ಆಚರಣೆ ಮಾಡಲಾಗುತ್ತದೆ. ದೇವಾಲಯದ ಅಂಗಳದ ಸುತ್ತಲೂ ಎಲೆಗಳನ್ನ ಹಾಕಿ ಅದರಲ್ಲಿ ನೈವೇದ್ಯ ಬಡಿಸಿದ್ದರು. ಅದ‌ನ್ನ ಹಸುಗಳು ತಿಂದ ಬಳಿಕ ಭಕ್ತರು ಎಲೆಯ ಮೇಲೆ ಉರುಳಾಡಿ ಎಡೆಸ್ನಾನ ಸೇವೆ ಮಾಡಿದರು.