ಮೊಟ್ಟೆ , ಮಾಂಸ ಸೇವಿಸುವುದರಿಂದ ಸಿಗುವ ಶಕ್ತಿ ಈ ಎರಡು ವಸ್ತು ಸೇವನೆಯಿಂದ ಸಿಗುತ್ತದೆಯಂತೆ.!

ಪ್ರೋಟೀನ್ ಕೊರತೆಯನ್ನು ಪೂರೈಸಲು ಮಾಂಸಹಾರಿಗಳು ಮೊಟ್ಟೆ, ಮೀನು ಮತ್ತು ಮಾಂಸವನ್ನು ಸೇವಿಸುತ್ತಾರೆ. ಆದರೆ ಸಸ್ಯಹಾರಿಗಳು ಪ್ರೋಟೀನ್ ಭರಿತ ಆಹಾರಕ್ಕಾಗಿ ಹುಡುಕಾಡುತ್ತಾರೆ. ಅದಕ್ಕಾಗಿ ಅವರು ಈ ಎರಡು ವಸ್ತುವನ್ನು ಸೇವಿಸಿದರೆ ಸಾಕು. ಇದರಲ್ಲಿ ಹಾಲು, ಮೊಟ್ಟೆ , ಮಾಂಸ ಸೇವಿಸುವುದರಿಂದ ಸಿಗುವಂತಹ ಹೆಚ್ಚು ಪ್ರೋಟೀನ್ ಸಿಗುತ್ತದೆ.
ಸೋಯಾಬೀನ್ ನಲ್ಲಿ (Soybeans, mature) ಬಹಳಷ್ಟು ಪ್ರೋಟೀನ್ ಕಂಡುಬರುತ್ತದೆ. ಇದರಲ್ಲಿ ಹಾಲು, ಮೊಟ್ಟೆ , ಮಾಂಸಕ್ಕಿಂತ ಹೆಚ್ಚು ಪ್ರೋಟೀನ್ ಇರುತ್ತದೆ. ಇದು ದೇಹದ ವಿವಿಧ ಅಗತ್ಯತೆಗಳನ್ನು ಪೂರೈಸುವುದಲ್ಲದೇ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮ.
ಒಬ್ಬ ವ್ಯಕ್ತಿ ದಿನಕ್ಕೆ 100 ಗ್ರಾಂ ಸೋಯಾಬೀನ್ ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ. 150 ಗ್ರಾಂ ಸೋಯಾಬೀನ್ ನಲ್ಲಿ((Soybeans, mature) 27 ಗ್ರಾಂ ಪ್ರೋಟೀನ್ ಇದೆ. ಇದನ್ನು ದಿನಕ್ಕೆ ಒಮ್ಮೆ ಬಳಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಹಾಗಾಗಿ ರಾತ್ರಿ ನೀರಿನಲ್ಲಿ ಸೋಯಾಬೀನ್ ಅನ್ನು ನೆನೆಸಿ ಬೆಳಿಗ್ಗೆ ಉಪಹಾರದಲ್ಲಿ ಸೇವಿಸಿ.
ಇನ್ನೊಂದು ವಸ್ತುವೆಂದರೆ ತೋಪು (Firm tofu) ಇದರಲ್ಲಿ 150 ಗ್ರಾಂ ನಲ್ಲಿ 26 ಗ್ರಾಂ ಪ್ರೋಟೀನ್ ಇದೆ.
ವಿಶೇಷವೇನೆಂದರೆ ಚಿಕನ್ ಹಾಗೂ ಬೇರೆಯ ಮಾಂಸಗಳಲ್ಲಿ ಇದಕ್ಕಿಂತ ಕಡಿಮೆ ಪ್ರೊಟೀನ್ ಅಂಶವಿರುತ್ತದೆ.