ವಿಧಾನಸಭೆ ಚುನಾವಣೆಗೆ 'BJP' ರಣಕಹಳೆ : 50 ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ, B.S ಯಡಿಯೂರಪ್ಪ ಪ್ರವಾಸ

ವಿಧಾನಸಭೆ ಚುನಾವಣೆಗೆ 'BJP' ರಣಕಹಳೆ : 50 ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ, B.S ಯಡಿಯೂರಪ್ಪ ಪ್ರವಾಸ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಲರ್ಟ್ ಆಗಿದ್ದು, ದಸರಾ ಹಬ್ಬದ ಬಳಿಕ ಸಿಎಂ ಬೊಮ್ಮಾಯಿ ಪ್ರವಾಸದ ಮೂಡ್ ನಲ್ಲಿದ್ದಾರೆ.

ಹೌದು, ರಾಜ್ಯ ಬಿಜೆಪಿ ಘಟಕದ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದು, ಅಕ್ಟೋಬರ್ 11 ರಿಂದ ಕ್ಷೇತ್ರ ಸಂಚಾರಕ್ಕೆ ಬಿಜೆಪಿ ಸಿದ್ದವಾಗಿದೆ.

ರಾಯಚೂರಿನಿಂದ ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಮಾಜಿ ಸಿಎಂ ಯಡಿಯೂರಪ್ಪಅವರೊಂದಿಗೆ ಸಿಎಂ ಬೊಮ್ಮಾಯಿ ಪ್ರವಾಸ ಕೈಗೊಂಡಿದ್ದಾರೆ. ಮೊದಲ ಹಂತದಲ್ಲಿಅಕ್ಟೋಬರ್ 11 ರಿಂದ 13 ರವರೆಗೆ ಮುಖ್ಯಮಂತ್ರಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ರಾಯಚೂರು, ಮಸ್ಕಿ, ಕುಷ್ಟಗಿಯಲ್ಲಿ ಮೊದಲ ಹಂತದ ರ್ಯಾಲಿ ನಡೆಸಲಿದ್ದಾರೆ.

ನಂತರ ಅಕ್ಟೋಬರ್ 17 ರಿಂದ ಎರಡನೇ ಹಂತದಲ್ಲಿ ಕಲಬುರ್ಗಿ ಮತ್ತು ಬೀದರ್ ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ತಿಂಗಳಿನಲ್ಲಿ 50 ಕ್ಷೇತ್ರಗಳಿಗೆ ಇಬ್ಬರು ನಾಯಕರು ಭೇಟಿ ನೀಡಲಿದ್ದಾರೆ.