ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಶುರು: ಸಚಿವ ಪ್ರಲ್ಹಾದ ಜೋಶಿ ಅವರಿಂದ ಉದ್ಘಾಟನೆ; ಯಡೂರಿನಿಂದ 550 ಕಿ.ಮೀ. ಯಾತ್ರೆ

ಬೆಳಗಾವಿ: ಧರ್ಮ ಮತ್ತು ಆಧ್ಯಾತ್ಮಿಕ ತಳಹದಿ ಮೇಲೆ ನಮ್ಮ ದೇಶ ನಿಂತಿದ್ದು, ಹಾಗಾಗಿಯೇ ನಾವೆಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರ ದೇವಸ್ಥಾನದಿಂದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಲೋಕಕಲ್ಯಾಣಕ್ಕಾಗಿ ಶನಿವಾರ ಹಮ್ಮಿಕೊಂಡಿರುವ 560 ಕಿ.ಮೀ.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಮಾಜ, ಧರ್ಮಕ್ಕೋಸ್ಕರ ಜನರಲ್ಲಿ ಜಾಗೃತಿ ಮೂಡಿಸಲು ಪೂಜ್ಯರು ಯಡೂರಿನಿಂದ ಶ್ರೀಶೈಲದವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಮಾನಸಿಕ ನೆಮ್ಮದಿ ಹೊಂದಲ ಪೂಜ್ಯರ ಆರ್ಶೀವಾದ ಬೇಕು. ಪಾದಯಾತ್ರೆಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಯಡೂರಿನಿಂದ ಶ್ರೀಶೈಲವರೆಗಿನ ಪಾದಯಾತ್ರೆ ಹಮ್ಮಿಕೊಂಡಿರುವುದು ವಿಶೇಷ ನಡೆಯಾಗಿದೆ. ಈ ಧಾರ್ವಿುಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಜನಕಲ್ಯಾಣವೂ ಆಗಲಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರ ಮಾಜಿ ಗೃಹ ಸಚಿವ ಸಿದ್ದರಾಮ ಮೇತ್ರಿ, ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದ ಶಾಸಕ ಶಿಲ್ಪಾ ಚಕ್ರಪಾಣಿ ರೆಡ್ಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಂಎಲ್ಸಿ ಪ್ರಕಾಶ ಹುಕ್ಕೇರಿ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಹಾಗೂ ವಿವಿಧ ಮಠಾಧೀಶರು ಇತರರಿದ್ದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರ ದೇವಸ್ಥಾನದಿಂದ ಆಂಧ್ರಪ್ರದೇಶದ ಶ್ರೀಶೈಲವರೆಗೆ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ, ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪಂಡಿತಾರಾಧ್ಯ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ, ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇತರರಿದ್ದರು.ಧರ್ಮ, ರಾಜಕೀಯ ಸಮಾಜದ ಅಂಗ
ಶ್ರೀಶೈಲ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪಂಡಿತಾರಾಧ್ಯ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ವ್ಯಸನ ಮುಕ್ತ ಶುದ್ಧ ಸಮಾಜ ನಿರ್ವಣ, ಪರಿಸರ ಸಂರಕ್ಷಣೆ, ನಮ್ಮ ಪರಂಪರೆ ಉಳಿಸುವ, ಜನ ಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಯಡೂರಿನಿಂದ ಸುಕ್ಷೇತ್ರ ಶ್ರೀಶೈಲವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆಲ್ಲ ಭಕ್ತರ ಉದಾರ ಅಂತಃಕರಣ ಕಾರಣ ಎಂದರು. ಭಕ್ತರ ದಾನದಿಂದಲೇ ಧಾರ್ವಿುಕ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಧರ್ಮ ಮತ್ತು ರಾಜಕೀಯ ಸಮಾಜದ ಪ್ರಮುಖ ಅಂಗ. ಪರಿಶುದ್ಧ ಸಮಾಜ ನಿರ್ವಣದಲ್ಲಿ ಧರ್ಮದ ಪಾತ್ರ ದೊಡ್ಡದಿದೆ. ಯುವಕರು ವ್ಯಸನ ಮುಕ್ತರಾಗಬೇಕು. ಸಂಕಲ್ಪ ದೃಢವಾಗಿದ್ದರೆ ಕಷ್ಟ ಎದುರಿಸಿ ದಡ ಸೇರಲು ಸಾಧ್ಯ ಎಂದರು. ಪಾದಯಾತ್ರೆ, ಧಾರ್ವಿುಕ ಕೆಲಸಕ್ಕೆ ದಾನ ಮಾಡಲಿಲ್ಲ ಎಂಬ ಅಸಮಾಧಾನ ಯಾರ ಮನಸ್ಸಿನಲ್ಲಿ ಮೂಡಬಾರದು. ಪಾದಯಾತ್ರೆಗೆ ಐದು ರೊಟ್ಟಿ, 50 ರೂ. ನೀಡಿ ಎಂದು ಜಗದ್ಗುರುಗಳು ಕರೆ ನೀಡಿದರು.
ಶ್ರೀಶೈಲದಲ್ಲಿ ಯಾತ್ರಿ ನಿವಾಸ ಕೊಠಡಿ ನಿರ್ವಣಕ್ಕೆ ಜುಗೂಳ ಗ್ರಾಮದ ಮಲ್ಲಿಕಾರ್ಜುನ ಅರ್ಬನ್ಕೋ-ಆಪರೇಟಿವ್ ವತಿಯಿಂದ 6 ಲಕ್ಷ ರೂ. ನೀಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಒಂದು ದಿನದ ವಿಶೇಷ ಸೇವೆಗಾಗಿ 51 ಸಾವಿರ ರೂ. ನೀಡಲಾಗುವುದು. ಅಲ್ಲದೆ, ಜಗದ್ಗುರುಗಳ ಪಾದಯಾತ್ರೆಯುದ್ದಕ್ಕೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಿಂದ ಆಂಬುಲೆನ್ಸ್, ಔಷಧ ಹಾಗೂ ಒಬ್ಬ ವೈದ್ಯರನ್ನು ಕಳುಹಿಸಲಾಗುವುದು.
| ಡಾ.ಪ್ರಭಾಕರ ಕೋರೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ
ಆದಾಯಕ್ಕೋಸ್ಕರ ಸರ್ಕಾರ ಸಾರಾಯಿ ಪೋ›ತ್ಸಾಹಿಸುತ್ತಿದೆ. ಆದರೆ, ಸಾರಾಯಿಯಿಂದ ಸರ್ಕಾರಕ್ಕೆ ಹತ್ತು ಪಟ್ಟು ಖರ್ಚಾಗುತ್ತಿದೆ. ಸರ್ಕಾರ ಜನರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ಮೂಲಕ ಸುಮಾರು 2 ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತಿದೆ. ಹಾಗಾಗಿ, ಮದ್ಯ ನಿಷೇಧ ಮಾಡಿದರೆ ಒಳ್ಳೆಯದು.
| ಡಾ.ವಿಜಯ ಸಂಕೇಶ್ವರ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್
ಕೃಷಿ ಉಳಿಸಲು ಸಂಕಲ್ಪ ಮಾಡಿ
ಕಾಶಿ ಜ್ಞಾನಸಿಂಹಾಸನಾ ಮಹಾಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಜಗದ್ಗುರುಗಳ ಪಾದಯಾತ್ರೆಯುದ್ದಕ್ಕೂ ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. ಧರ್ಮ ಜಾಗೃತಿ, ಜನಕಲ್ಯಾಣಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಸಸಿ ನೆಡುವವರು ಬಹಳ ಜನರಿದ್ದಾರೆ. ಬಳಿಕ ಆ ಸಸಿಗಳ ನೀರಿಲ್ಲದೆ ಒಣಗಿ ಹೋಗುತ್ತವೆ. ಹಾಗಾಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಪಾದಯಾತ್ರೆ ಉದ್ದಕ್ಕೂ ನೆಡುವ ಸಸಿಗಳ ಪಕ್ಕದಲ್ಲಿ ಗಡಿಗೆ ಇಡಲಾಗುತ್ತಿದೆ ಎಂದರು. ಸರ್ಕಾರವು ಮದ್ಯ ನಿಷೇಧ ಮಾಡಲು ಮುಂದಾಗಬೇಕು. ಮದ್ಯ ನಿಷೇಧದಿಂದ ಸರ್ಕಾರಕ್ಕೆ ಕಷ್ಟ ಆಗುವುದಿಲ್ಲ. ರೈತ ಕುಟುಂಬಗಳನ್ನು ರಕ್ಷಿಸಬೇಕಾಗಿದೆ. ರೈತರ ಕೈಯಲ್ಲಿ ವಿಷದ ಔಷಧ ಕೊಟ್ಟು ಬೆಳೆ ಬೆಳೆಯಲು ಪೋ›ತ್ಸಾಹಿಸುತ್ತಿದ್ದೇವೆ. ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಆಗಬೇಕಿದೆ. ವಿಷಮುಕ್ತ ಆಹಾರ ಬೆಳೆ ಬೆಳೆಯಲು ರೈತರನ್ನು ಪೋ›ತ್ಸಾ ಹಿಸುವ ಕೆಲಸ ಆಗಬೇಕಿದೆ ಎಂದು ಶ್ರೀಗಳು ಕಳಕಳಿ ವ್ಯಕ್ತಪಡಿಸಿದರು.
ಮದ್ಯದಿಂದ ಸರ್ಕಾರಕ್ಕೆ ಹತ್ತು ಪಟ್ಟು ಖರ್ಚು
ಯಡೂರಿನ ಚನ್ನಮ್ಮ ವೃತ್ತದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಸ್ವಾಮೀಜಿಗಳು.60-70 ವರ್ಷಗಳಿಂದ ನಮ್ಮ ಕುಟುಂಬ ಹಾಗೂ ಶ್ರೀಶೈಲ ಪೀಠಕ್ಕೆ ಅವಿನಾಭಾವ ಸಂಬಂಧವಿದೆ. ನಮ್ಮ ಕುಟುಂಬದ ಮೇಲೆ ಶ್ರೀಶೈಲ ಮಲ್ಲಿಕಾರ್ಜುನ ಆಶೀರ್ವಾದ ಇದೆ. ನಮ್ಮಪತ್ರಿಕೆ ಮೂಲಕ ಜನರಿಗೆ ಭಾರತೀಯ ಪರಂಪರೆ ತಿಳಿಸುವ ಮತ್ತು ಧಾರ್ವಿುಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹೇಳಿದರು. ಶ್ರೀಕ್ಷೇತ್ರ ಯಡೂರನಿಂದ ಸುಕ್ಷೇತ್ರ ಶ್ರೀಶೈಲದವರೆಗೆ ಜಗದ್ಗುರುಗಳ ಪಾದಯಾತ್ರೆಯಲ್ಲಿ ನಾವೆಲ್ಲರೂ ತನು-ಮನದಿಂದ ಭಾಗವಹಿಸುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವೇಳೆ ತನು-ಮನದಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಶ್ರೀಗಳ ಜತೆ ನಾಲ್ಕು ಹೆಜ್ಜೆ ಹಾಕಿ ಸೌಭಾಗ್ಯ ಪಡೆದುಕೊಳ್ಳಿ. ಅದು ಸಾಧ್ಯವಾಗದಿದ್ದರೆ ಕೆಟ್ಟ ಚಟ ಹಾಗೂ ಕೆಟ್ಟ ಆಲೋಚನೆಗಳನ್ನು ಶ್ರೀಗಳ ಜೋಳಿಗೆಯಲ್ಲಿ ಹಾಕಿ ಎಂದು ಕರೆ ನೀಡಿದರು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅಪರಾಧ ಪ್ರಮಾಣ ಕಡಿಮೆ ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆಗೆ ನಮ್ಮ ಸಹಮತವಿದೆ. ನನಗೆ ರಾಜಕಾರಣಿಗಳಂತೆ ಭಾಷಣ ಮಾಡಲು ಬರುವುದಿಲ್ಲ. ಆದರೆ, ಚೆನ್ನಾಗಿ ಲೆಕ್ಕ ಮಾಡಲು ಬರುತ್ತದೆ. ಆದಾಯಕ್ಕೋಸ್ಕರ ಸರ್ಕಾರ ಸಾರಾಯಿ ಪೋ›ತ್ಸಾಹಿಸುತ್ತಿದೆ. ಆದರೆ, ಸಾರಾಯಿಯಿಂದ ಸರ್ಕಾರಕ್ಕೆ ಹತ್ತು ಪಟ್ಟು ಖರ್ಚಾಗುತ್ತಿದೆ. ಸರ್ಕಾರ ಜನರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ಮೂಲಕ ಸುಮಾರು 2 ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತಿದೆ. ಹಾಗಾಗಿ, ಮದ್ಯ ನಿಷೇಧ ಮಾಡಿದರೆ ಒಳ್ಳೆಯದು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಡಾ.ಸಂಕೇಶ್ವರ ವಿನಂತಿಸಿದರು.