ಇಂದಿನಿಂದ 11 ದಿನಗಳ ಕಾಲ ದತ್ತಜಯಂತಿ | Chikmagalur |

ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ 11 ದಿನಗಳ ಕಾಲ ನಡೆಯುವ ದತ್ತಜಯಂತಿ ಇಂದಿನಿಂದ ಆರಂಭವಾಗಿದ್ದು, ದತ್ತ ಮಾಲಾಧಾರಣೆ ಮಾಡುವ ಮೂಲಕ ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಜಯಂತಿಗೆ ಚಾಲನೆ ನೀಡಲಾಯಿತು. ಇಂದಿನಿಂದ ಡಿ.19ರವರೆಗೆ ವಿಶ್ವಹಿಂದೂ ಪರಿಷತ್, ಭಜರಂಗದಳ ವತಿಯಿಂದ ದತ್ತಜಯಂತಿ ನಡೆಯುತ್ತಿದ್ದು, ಜಿಲ್ಲೆ ಸೇರಿ ರಾಜ್ಯಾದ್ಯಂತ ಸಾವಿರಾರು ದತ್ತಭಕ್ತರಿಂದ ಮಾಲಾಧಾರಣೆ ನಡೆಯಿತು, ಡಿ.19ರಂದು ದತ್ತಪೀಠಕ್ಕೆ 20 ಸಾವಿರಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ.