ಪ್ರೀತಿಸದಿದ್ದಕ್ಕೆ ಕೊಂದೇ ಬಿಟ್ಟ ಪಾಗಲ್ ಪ್ರೇಮಿ; 10ನೇ ತರಗತಿ ವಿದ್ಯಾರ್ಥಿನಿಯ ದುರಂತ ಅಂತ್ಯ

ಪ್ರೀತಿಸದಿದ್ದಕ್ಕೆ ಕೊಂದೇ ಬಿಟ್ಟ ಪಾಗಲ್ ಪ್ರೇಮಿ; 10ನೇ ತರಗತಿ ವಿದ್ಯಾರ್ಥಿನಿಯ ದುರಂತ ಅಂತ್ಯ

ಪ್ರೀತಿಗಾಗಿ(Love) ಜನ ಏನು ಮಾಡುವುದಕ್ಕೂ ರೆಡಿಯಾಗಿರುತ್ತಾರೆ. ಪ್ರೀತಿ ಅಂದರೇನೇ ಹಾಗೆ, ಯಾವುದು ಸರಿ, ಯಾವುದು ತಪ್ಪು ತಿಳಿಯದ ಹಾಗೆ ಮಾಡಿಬಿಡುತ್ತೆ. ಉತ್ತರಪ್ರದೇಶದಲ್ಲಿ(Uttar Pradesh) ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ, 10ನೇ ತರಗತಿ ವಿದ್ಯಾರ್ಥಿನಿ(10th standard student)ಯನ್ನು ಕೊಂದಿದ್ದಾನೆ. ಉತ್ತರ ಪ್ರದೇಶದ ಬುಲಂದ್‌ಶಹರ್ ನಾ ಹೈವೇ ರಸ್ತೆಯಲ್ಲೇ ಹೃದಯವಿದ್ರಾವಕ ಘಟನೆ ನಡೆದಿದೆ. ಯಾರು ಇಲ್ಲದನ್ನು ಗಮನಿಸಿ ಬಾಲಕಿಯನ್ನ 15 ವರ್ಷದ ಬಾಲಕ ಹತ್ಯೆ ಮಾಡಿದ್ದಾನೆ. ಹದಿಹರೆಯದ ವಯಸ್ಸಿನಲ್ಲಿ ಎಡವಟ್ಟು ಮಾಡಿಕೊಂಡ ಪಾಗಲ್ ಪ್ರೇಮಿ(Lover)ಯನ್ನ ಪೊಲೀಸರು(Police) ಬಂಧಿಸಿ ಜೈಲಿಗಟ್ಟಿದ್ದಾರೆ.

15 ವರ್ಷದ ಬಾಲಕನೊಬ್ಬ 16 ವರ್ಷದ ಬಾಲಕಿ ಹಿಂದೆ ಬಿದ್ದಿದ್ದ. ತನ್ನ ಪ್ರೀತಿಯನ್ನು ಆಕೆಯ ಬಳಿ ಹೇಳಿಕೊಂಡಿದ್ದ. ಆಕೆ ಎಷ್ಟೇ ಬೇಡವೆಂದರೂ ತೊಂದರೆ ಕೊಡುತ್ತಲೇ ಇದ್ದ. ಇದಾದ ಬಳಿಕ ಬಾಲಕಿ ಆ ಪಾಗಲ್ ಪ್ರೇಮಿಯ ಕಪಾಳಕ್ಕೆ ಬಾರಿಸಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಬಾಲಕ ಈಕೆಯನ್ನ ಜೋರಾಗಿ ಕೆಳಗೆ ತಳ್ಳಿದ್ದಾನೆ. ಕೆಳಗೆ ಬಿದ್ದ ಬಾಲಕಿ ತಲೆ ಅಲ್ಲೇ ಇದ್ದ ಕಲ್ಲಿಗೆ ಹೊಡೆದಿದೆ. ತೀವ್ರ ರಕ್ತಸ್ರಾವವಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ನೆರೆಮನೆಯವನಾದ ಸುನಿಲ್ ಎಂಬಾತ ಯುವತಿಯನ್ನ ಪ್ರೀತಿಸುತ್ತಿದ್ದ. ಹಲವು ದಿನಗಳಿಂದ ಈಕೆಯ ಬಳಿ ಇದನ್ನ ಹೇಳಿಕೊಳ್ಳಬೇಕೆಂದು ಪ್ರಯತ್ನ ಪಡುತ್ತಿದ್ದ. ಪ್ರತಿದಿನ ತಂದೆ-ತಾಯಿ ಹಾಗೂ ಸ್ನೇಹಿತರ ಜೊತೆ ವಿದ್ಯಾರ್ಥಿನಿ ಶಾಲೆಗೆ ಹೋಗಿ ಬರುತ್ತಿದ್ದಳು. ಹೀಗಾಗಿ ಈತನ ಪ್ರೀತಿ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಒಂದು ದಿನ ಆಕೆ ಒಬ್ಬಂಟಿಯಾಗಿ ಬರುವುದನ್ನ ಕಂಡಿದ್ದಾನೆ. ಕೂಡಲೇ ಆಕೆಯನ್ನು ಹಿಂಬಾಲಿಸಿ ಬುಲಂದ್‌ಶಹರ್ ಹೈವೆ ರಸ್ತೆಯ ಬಳಿ ಬಂದಿದ್ದಾರೆ. ಈ ವೇಳೆ ಬಾಲಕಿ ಬಳಿ ತನ್ನ ಪ್ರೀತಿಯನ್ನು ಬಾಲಕ ಹೇಳಿಕೊಂಡಿದ್ದಾನೆ. ಆಕೆಯ ನಂಬರ್ ಕೊಡುವಂತೆ ಕಾಡಿದ್ದಾನೆ.

:Tragedy: ತಾತ ತಂದಿಟ್ಟಿದ್ದ ಬ್ರಾಂಡಿ ಕುಡಿದು ಬಾಲಕ ಸಾವು, ಮೊಮ್ಮಗನ ಸ್ಥಿತಿ ಕಂಡು ಮೃತಪಟ್ಟ ಅಜ್ಜ

ಆದರೆ ಬಾಲಕಿ ನಂಬರ್ ಕೊಡಲು ನಿರಾಕರಿಸಿದ್ದಾಳೆ. "ನಾನು ಇನ್ನೂ ಚಿಕ್ಕ ಹುಡುಗಿ, ಈಗ ತಾನೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಹೀಗೆಲ್ಲ ತೊಂದರೆ ಕೊಡಬೇಡಿ" ಎಂದು ಸುನೀಲ್ ಬಳಿ ಬಾಲಕಿ ಮನವಿ ಮಾಡಿಕೊಂಡಿದ್ದಾಳೆ. ಬಾಲಕಿ ಏನೇ ಹೇಳಿದರೂ ಸುನೀಲ್ ತಲೆಕೆಡಿಸಿಕೊಂಡಿಲ್ಲ. ಮತ್ತೆ ಆಕೆಯನ್ನು ನಂಬರ್ ಕೊಡುವಂತೆ ಪೀಡಿಸಿದ್ದಾನೆ. ಕೋಪಗೊಂಡ ಬಾಲಕಿ, ಸುನೀಲ್ ಕಪಾಳಕ್ಕೆ ಬಾರಿಸಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಪಾಗಲ್ ಪ್ರೇಮಿ ಆಕೆಯನ್ನು ಕೆಳಗೆ ತಳ್ಳಿದ್ದಾನೆ. ಈ ವೇಳೆ ಪಕ್ಕದಲ್ಲಿದ್ದ ಕಲ್ಲಿಗೆ ತಲೆ ಹೊಡೆದು, ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಘಟನೆ ಕಂಡು ಪಾಗಲ್ ಪ್ರೇಮಿ ಗಾಬರಿಗೊಂಡಿದ್ದಾನೆ. ಆಕೆ ಬದುಕಿದ್ದಾಳೋ, ಸತ್ತಿದ್ದಾಳೂ ಅಂತ ಪರೀಕ್ಷೆ ಮಾಡಿದ್ದಾನೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪಾಗಲ್

ಬಾಲಕಿ ಸತ್ತಿದ್ದಾಳೆಂದು ಖಚಿತಪಡಿಸಿಕೊಂಡ ನಂತರ ಸುನೀಲ್ ಅಲ್ಲಿಂದ ಪರಾರಿಯಾಗಿದ್ದಾನೆ. ಊರಿನಲ್ಲಿ ತನಗೂ ಈ ಸಾವಿಗೆ ಸಂಬಂಧವಿಲ್ಲದಂತೆ ಬಾಲಕ ಆರಾಮಾಗಿದ್ದ. ಬಾಲಕಿ ಸಾವಿನ ಸುದ್ದಿ ಗ್ರಾಮದಲ್ಲಿ ಜೋರಾಗಿ ಸದ್ದು ಮಾಡಿತ್ತು. ಗ್ರಾಮದಲ್ಲಿ ಹಲವು ಪ್ರತಿಭಟನೆಗಳು ಕೂಡ ನಡೆದಿದ್ದವು. ಈ ಪ್ರತಿಭಟನೆಯಲ್ಲಿ ಪಾಗಲ್ ಪ್ರೇಮಿ ಭಾಗವಹಿಸಿದ್ದಾನೆ. ಬಾಲಕಿ ಖುರ್ಜಾದಲ್ಲಿ ಕೋಚಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ ಪಾಗಲ್ ಪ್ರೇಮಿ ಆಕೆಯನ್ನು ಕೊಂದು, ಅಲ್ಲೇ ಪಕ್ಕದ ಹೊಲದಲ್ಲಿ ಶವವನ್ನ ಬಿಸಾಕಿ ಹೋಗಿದ್ದ.

ಘಟನೆ ನಡೆದ ಸಂದರ್ಭದಲ್ಲಿ ಗ್ರಾಮಸ್ಥರು ಕೆಂಪು ಶರ್ಟ್ ಧರಿಸಿ ಯುವಕನೊಬ್ಬ ಓಡಿ ಹೋಗುತ್ತಿದ್ದನ್ನ ಗಮನಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಕೆಲ ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು. ಆದರೆ ಕೊಲೆಗಾರ ಯಾರು ಎಂದು ಪೊಲೀಸರಿಗೂ ತಿಳಿದಿರಲಿಲ್ಲ. ಬಳಿಕ 300 ಜನರ ಮೊಬೈಲ್ ನೆಟ್ ವರ್ಕ್
ಅನ್ನು ಪೊಲೀಸರು ಪರಿಶೀಲಿಸಿದರು. ಈ ವೇಳೆ ಈ ಕೊಲೆ ಮಾಡಿರುವುದು ಸುನೀಲ್ ಮತ್ತು ಆತನ ಸ್ನೇಹಿತರು ಎಂಬುದು ತಿಳಿದುಬಂದಿದೆ. ಪೊಲೀಸರ ಮುಂದೆ ತಾನು ಮಾಡಿದ ತಪ್ಪನ್ನು ಸುನೀಲ್ ಒಪ್ಪಿಕೊಂಡಿದ್ದಾನೆ.