ವಾಹನ ಸವಾರರ ಜೇಬಿಗೆ ಕತ್ತರಿ : ಇಂದು ಪೆಟ್ರೋಲ್, ಡಿಸೇಲ್ ದರ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಇಂದು ಸತತ ನಾಲ್ಕನೇ ದಿನವೂ ಪೆಟ್ರೋಲ್ (petrol) ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ (price hike). ಪ್ರತಿ ಲೀಟರ್ ಪೆಟ್ರೋಲ್ ಮೇಲೆ 30 ಪೈಸೆ ಹಾಗೂ ಡೀಸೆಲ್ ಮೇಲೆ 35 ಪೈಸೆಯಷ್ಟು ಏರಿಕೆ ಕಂಡಿದೆ.
ರಾಜ್ಯ ರಾಜಧಾನಿ (capital) ಬೆಂಗಳೂರಿನಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 31 ಪೈಸೆ ಏರಿದರೆ, ಲೀಟರ್ ಡೀಸೆಲ್ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ.
ಬೆಂಗಳೂರು : ಪೆಟ್ರೋಲ್: ₹107.14, ಡೀಸೆಲ್: ₹97.77
ಮಂಗಳೂರು : ಪೆಟ್ರೋಲ್: ₹106.29, ಡೀಸೆಲ್: ₹96.96
ಮೈಸೂರು : ಪೆಟ್ರೋಲ್: ₹106.91, ಡೀಸೆಲ್: ₹97.55
ನವದೆಹಲಿ : ಪೆಟ್ರೋಲ್: ₹103.54, ಡೀಸೆಲ್: ₹92.12
ಚೆನ್ನೈ : ಪೆಟ್ರೋಲ್ : ₹101.01, ಡೀಸೆಲ್ : ₹96.60
ಮುಂಬೈ : ಪೆಟ್ರೋಲ್ : ₹109.54, ಡೀಸೆಲ್ : ₹99.92