ಮೂವರು ಮಕ್ಕಳ ಸಮೇತ ಸಂಪ್​ಗೆ ಬಿದ್ದು ಸಾವಿಗೆ ಶರಣಾದ ಮಹಿಳೆ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

ಮೂವರು ಮಕ್ಕಳ ಸಮೇತ ಸಂಪ್​ಗೆ ಬಿದ್ದು ಸಾವಿಗೆ ಶರಣಾದ ಮಹಿಳೆ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

ವಿಜಯಪುರ: ಕೌಟುಂಬಿಕ ಕಲಹ ಹಿನ್ನಲೆ ಮೂವರು ಮಕ್ಕಳ ಸಮೇತ ನೀರಿನ ಸಂಪ್​ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.

ಗೀತಾ ರಾಮು ಚೌವ್ಹಾಣ (32) ಮೃತ ಮಹಿಳೆ.

ಆಕೆಯ ಮಕ್ಕಳಾದ ಸೃಷ್ಟಿ (6) ಸಮರ್ಥ (4) ಹಾಗೂ ಕಿಶನ್ (3) ಕೂಡ ದುರಂತ ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ ಪತಿ ರಾಮು ಜೊತೆ ಗೀತಾ ಜಗಳವಾಡಿದ್ದ. ಇದರಿಂದ ಬೇಸತ್ತು ಗೀತಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.

ಪತಿ ರಾಮು ಮಲಗಿದ್ದ ವೇಳೆ ಮೂವರು‌ ಮಕ್ಕಳನ್ನು ನೀರಿನ‌ ಸಂಪ್​​ಗೆ ಎಸೆದ ಪಾಪಿ ತಾಯಿ, ಬಳಿಕ ತಾನೂ ಸಂಸ್​ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)