ಅಕ್ರಮ ಗೂಡಂಗಡಿಗಳಿಗೆ ಅನುಮತಿ‌ ನೀಡಿತಾ ನಗರ ಸಭೆ.? ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು‌ ಕಾನೂನು.

ಅಕ್ರಮ ಗೂಡಂಗಡಿಗಳಿಗೆ ಅನುಮತಿ‌ ನೀಡಿತಾ ನಗರ ಸಭೆ.? ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು‌ ಕಾನೂನು.
ಭ್ರಷ್ಟಚಾರದಲ್ಲೇ ನಂಬರ್ ವನ್ ಪಟ್ಟಿಯಲ್ಲಿರುವ ಉಡುಪಿ ನಗರ ಸಭೆ.ಕಾಸಿದ್ದವರ ಪರ ಎನ್ನುವ ಅರೋಪ ಮತ್ತೊಮ್ಮೆ‌ ಸಾಬೀತಾಗಿದೆ.ನಗರದಲ್ಲಿ ಹೊಟ್ಟೆ ಪಾಡಿಗಾಗಿ ಗೂಡಂಗಡಿಗಳನ್ನಿಟ್ಟುಕೊಂಡ್ರೆ ಧೀಡೀರ್ ಜೆಸಿಬಿ ಗಳೊಂದಿಗೆ ಪತ್ಯಕ್ಷವಾಗುವ ನಗರ ಸಭೆಯ ಭ್ರಷ್ಟ ಅಧಿಕಾರಿಗಳು ,ಶ್ರೀ ಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಅಕ್ರಮ ಗೂಡಂಗಡಿಗಳನ್ನು ತೆರೆಯಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಪಾರ್ಕಿಂಗ್ ಪ್ರದೇಶದಲ್ಲಿ ನಗರ ಸಭೆಯ ಅನುಮತಿಯಿಲ್ಲದೇ ಹತ್ತಕ್ಕೂ ಹೆಚ್ಚು ಗೂಡಂಗಡಿಗಳನ್ನು ನಿರ್ಮಿಸುತ್ತಿದ್ದ ಶ್ರೀ ಕೃಷ್ಣ ಪ್ರತಿಷ್ಟಾನದ ವಿರುದ್ದ ಸಾರ್ವಜನಿಕರು ಅಕ್ಷೇಪ ವ್ಯಕ್ತಪಡಿಸಿದ್ದರು.ಹೀಗಾಗಿ ನಗರ ಸಭೆ ಅಕ್ರಮ‌ ಗೂಡಂಗಡಿಗಳಿಗೆ ನಿರ್ಮಣ ಸ್ಥಗಿತಗೊಳಿಸುವಂತೆ ಅದೇಶಿಸಿತ್ತು.
ಕೊವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಜನ ಸಂಚಾರ ಕಡಿಮೆಯಾದ ತಕ್ಷಣ ನಗರಸಭೆಯ ಭ್ರಷ್ಟ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು.ಮತ್ತೆ ಗೂಡಂಗಡಿಗಳ ಕರಲಸ ಪ್ರರಾಂಭಿಸಿ ಸುಣ್ಣ ಬಣ್ಣ ಬಳಿದು ರೆಡಿಯಾಗಿವೆ ನಿಂತಿದೆ.ಅಕ್ರಮವಾಗಿ ನಿರ್ಮಾಣವಾಗಿರುವ ಈ ಗೂಡಂಗಡಿಗಳಿಗೆ ನಗರ ಸಭೆ ಅನುಮತಿ ಕೂಡ ನೀಡಲು ತಯಾರಾಗಿದೆಯಂತೆ.
ಅಕ್ರಮ‌ ಗೂಡಂಗಡಿಗಳಿಗೆ ಶಾಸಕರ ಸಾಥ್.?
ಅಕ್ರಮ‌ ಗೂಡಂಗಡಿಗಳ‌ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದಾಗ ಸ್ಥಳೀಯ ಶಾಸಕ ಮಧ್ಯೆ ಪ್ರವೇಶಿಸಿ ಪ್ರವಾಸಿಗರು ಅಗಮಿಸುವ ಹಿನ್ನಲೆಯಲ್ಲಿ ಸುಸಜ್ಜಿತವಾಗಿ ಅಂಗಡಿಗಳನ್ನು ನಿರ್ಮಿಸಿಕೊಡುತ್ತಿದ್ದು ಕಾನೂನು‌ಬದ್ದವಾಗಿ ನಿರ್ಮಿಸಿಕೊಡಲು ಶಾಸಕರು ಮಠದ ಪರವಾಗಿ ವಾದಿಸಿದ್ದರು.
ಅದ್ರೆ ಇದಕ್ಕೆ‌ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಗೂಡಂಗಡಿ‌ ನಿರ್ಮಾಣಕ್ಕೆ ಅನುಮತಿ ನೀಡುವುದೇ ಅದಲ್ಲಿ ಉಡುಪಿ ನಗರದ ಇತರ ಕಡೆಯೂ ನಿರುದ್ಯೋಗಿಗಳಿಗೆ ಅತ್ಮ‌ನಿರ್ಭರದಡಿಯಲ್ಲಿ ಗೂಡಂಗಡಿ‌ ನಿರ್ಮಿಸಲು ಅನುಮತಿ ನೀಡುವಂತೆ ನಾಗರಿಕರಿಂದ ಒತ್ತಾಯಗಳು ಕೇಳು ಬರ ತೊಡಗಿದೆ.
ಗೂಡಂಗಡಿ ವಿಚಾರವಾಗಿ ಸ್ಪಷ್ಟಪಡಿಸಿದ್ದ ಶ್ರಿ ಕೃಷ್ಣ ಪ್ರತಿಷ್ಟಾನ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿಗಳನ್ನು ಹಾಕಿರುವವರಿಗೆ ಬದಲಿ ವೆವಸ್ಥೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿತ್ತು.ಅದ್ರೆ ಇದೀಗ ಬಂದ ಮಾಹಿತಿ ಪ್ರಕಾರ ಅಲ್ಲಿದ್ದ ವ್ಯಾಪರಸ್ಥರು ಮುಂದಿನ ಅಗೊಸ್ಟ್ ತಿಂಗಳಿನೊಳಗೆ ಇಪ್ಪತೈದರಿಂದ ಮೂವತ್ತು ಸಾವಿರ ಮುಂಗಡ ಹಣ ಹಾಗೂ ಮಾಸಿಕ‌ ನಾಲ್ಕರಿಂದ ಐದು ಸಾವಿರದೊಳಗೆ ಮಾಸಿಕ ಬಾಡಿಗೆ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.ಹೊಟ್ಟೆ ಪಾಡಿಗಾಗಿ ಪ್ರವಾಸಿಗರನ್ನು ನಂಬಿ ವ್ಯಾಪರ ಮಾಡುತ್ತಿದ್ದ ವ್ಯಾಪರಸ್ಥರು ಕೊವಿಡ್ ನಿಂದಾಗಿ ವ್ಯಾಪರವಿಲ್ಲದೇ ಕಂಗಾಲಾಗಿದ್ದರು.ಜೊತೆಗೆ ಕಳೆದ ಬಾರಿ ಬಂದ ಭಾರೀ ಮಳೆಯಿಂದಾಗಿ ಉಂಟಾದ ನೆರೆಯಿಂದ ಭಾರೀ‌ ನಷ್ಟ ಉಂಟಾಗಿತ್ತು.ಇದೀಗ ಧನದಾಹಿಗಳು ಬಡವರ ಹೆಸರಲ್ಲಿ ಅಕ್ರಮವಾಗಿ ಗೂಡಂಗಡಿ ಕಟ್ಟಿ ದಂಧೆ ಮಾಡಲು ಮುಂದಾಗಿರುವುದು ಕಂಡು ಬಂದಿದೆ.ಇದಕ್ಕೆ ಸ್ಥಳೀಯ ನಗರ ಸಭೆಯ ಭ್ರಷ್ಟ ಅಧಿಕಾರಿಗಳು ಸಾಥ್ ಕೊಟ್ಟಿರಯವುದು ಬೆಳಕಿಗೆ ಬಂದಿದೆ.
ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿ ನಿರ್ಮಿಸುವಂತಿಲ್ಲ.
ರಾಜಾಂಗಣ ಬಳಿ ನಿರ್ಮಿಸಿರುವ ಪಾರ್ಕಿಂಗ್ ಪ್ರದೇಶದಲ್ಲಿ ಯಾವುದೇ ಅಂಗಡಿಗಳನ್ನು ನಿರ್ಮಿಸುವಂತಿಲ್ಲ ಎನ್ನುವ ಕಾರರು ಇದೆ.ಹೀಗಾಗಿ ಈ ಹಿಂದೆ ಶಿರೂರು ಶ್ರೀಗಳು ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿದ್ದ ಅಕ್ರಮ ಅಂಗಡಿಗಳನ್ನು‌ ಜೆಸಿಬಿ ಮೂಲಕ ನೆಲಸಮ ಗೊಳಿಸಿದ್ದರು.
ಇದೀಗ ಅವರ ಕಾಲ‌ನಂತರ ಕೆಲವೊಂದು ಧನ ದಾಹಿಗಳು ಈ ಟ್ರಸ್ಟ್ ನಲ್ಲಿ ಸೇರಿಕೊಂಡಿದ್ದು ಅಕ್ರಮ‌ಗೂಡಂಗಡಿಗಳನ್ನ ನಿರ್ಮಿಸಿ ತಮ್ಮ ಜೋಬು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾಹಿತಿಗಳು ದೊರೆತಿವೆ.ಇದಕ್ಕೆ ನಗರ ಸಭೆಯ ಅಧಿಕಾರಿಗಳು ಹಾಗೂ ಆಡಳಿತದಲ್ಲಿರುವ ಜನಪ್ರತಿನಿಧಿಗಳು ಮುಂದೆ ನಿಂತಿದ್ದಾರೆ ಎನ್ನಲಾಗಿದೆ.