ಇದು ಬಿಸಿಲು ಕುದುರೆ ಬಜೆಟ್, ಕಣ್ಣಿಗೆ ಕಾಣಲ್ಲ : ಡಿ.ಕೆ. ಶಿವಕುಮಾರ್ ವ್ಯಂಗ್ಯ

ಬೆಂಗಳೂರು : ಇಂದು ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕ ಬಜೆಟ್ 2023 ಮಂಡನೆ ಮಾಡಿದ್ದು, ರಾಜ್ಯ ಬಜೆಟ್ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಾಗಿದ್ದು, ಇದು ಬಿಸಿಲು ಕುದುರೆ ಬಜೆಟ್, ಕಣ್ಣಿಗೆ ಕಾಣೋದಿಲ್ಲ.
ಬಜೆಟ್ ನಲ್ಲಿ ಕೃಷಿ ಕಾರ್ಮಿಕ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ 500 ರೂ. ಕೊಡುತ್ತೇವೆ ಎಂದು ಹೇಳಿದ್ದಾರೆ. ಮೂರುವರೆ ವರ್ಷದಲ್ಲಿ ಅಧಿಕಾರದಲ್ಲಿ ಇದ್ದರೂ ಏನು ಮಾಡಿಲ್ಲ. ಈ ಬಜೆಟ್ ಮಂಡನೆ ಮಾಡಿ ಏನು ಮಾಡ್ತಾರೆ. ದಮ್ಮು, ಧೈರ್ಯ ಎಂದು ಭಾಷಣ ಮಾಡುವ ಸಿಎಂ ಬಜೆಟ್ ನಲ್ಲಿ ಧಮ್ಮು ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.