CM ಸ್ಥಾನಕ್ಕೆ ರಾಜೀನಾಮೆ ನೀಡಿ, ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಹೊರಬಂದೆ

CM ಸ್ಥಾನಕ್ಕೆ ರಾಜೀನಾಮೆ ನೀಡಿ, ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಹೊರಬಂದೆ

ಮೈಸೂರು: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಅಲ್ಲಿಂದ ಹೊರಬಂದೆ. ನಾನು ಕಣ್ಣೀರು ಹಾಕಿ ಹೊರಬಂದಾಗ ಬೇರೆಬೇರೆ ಮಾತುಗಳನ್ನ ಆಡಿದರು ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಅವರು..

ವಾಸ್ತವ ಅದಲ್ಲ, ಇಷ್ಟು ವರ್ಷದ ಜನರ ಪ್ರೀತಿ ಒಮ್ಮೆಲೆ ಕಣ್ಮುಂದೆ ಬಂದು ಕಣ್ಣೀರು ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 143 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ಸುಮ್ಮನೆ ಕೂರುವುದಿಲ್ಲ, ನಿಮ್ಮನ್ನೂ ಸುಮ್ಮನೆ ಕೂರಲು ಬಿಡುವುದಿಲ್ಲ ಅಂತಾ ಹೇಳುವ ಮೂಲಕ ವಿರೋಧಿಗಳಿಗೆ ಸವಾಲ್​ ಹಾಕಿದ್ದಾರೆ.

ಯಂಕ, ನಾಣಿ, ಸೀನ ಮನಬಂದಂತೆ ಮಾತನಾಡುತ್ತಾರೆ
ಪ್ರಧಾನಿ ನರೇಂದ್ರ ಮೋದಿಗೆ ಬಲ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ. ಯಂಕ, ನಾಣಿ, ಸೀನ ಮನಬಂದಂತೆ ಮಾತನಾಡುತ್ತಾರೆ. ಇದಕ್ಕೆ ಚುನಾವಣೆ ಮೂಲಕ ಉತ್ತರ ನೀಡಬೇಕು. ಮೋದಿ ಬಗ್ಗೆ ಅಲ್ಪವಾಗಿ ಮಾತನಾಡುವವರಿಗೆ ವೋಟ್​ನ ಮೂಲಕ ಉತ್ತರ ಕೊಡಬೇಕು. ಜನಗಳ ಪ್ರೀತಿ ವಿಶ್ವಾಸ ನಮ್ಮ ಬಳಿ ಇದೆ. ಇದು ಕೇವಲ ಮೈಸೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಜನ ಪ್ರೀತಿ ನೀಡ್ತಿದ್ದಾರೆ. ನನಗೆ ರಾಜಕೀಯ ತೃಪ್ತಿ ಇದೆ, ಸಮಾಧಾನ ಇದೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಸಂಘಟನೆ ಅವಶ್ಯಕತೆ ಇದೆ ಎಂದಿದ್ದಾರೆ.