ಒಮಿಕ್ರಾನ್' ಭೀತಿ : ಬೆಂಗಳೂರಿನಲ್ಲಿ ಕಟ್ಟು ನಿಟ್ಟಿನ ರೂಲ್ಸ್ ಜಾರಿ, 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಥಿಯೇಟರ್ ಗೆ ಎಂಟ್ರಿ

ಒಮಿಕ್ರಾನ್' ಭೀತಿ : ಬೆಂಗಳೂರಿನಲ್ಲಿ ಕಟ್ಟು ನಿಟ್ಟಿನ ರೂಲ್ಸ್ ಜಾರಿ, 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಥಿಯೇಟರ್ ಗೆ ಎಂಟ್ರಿ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ( Omicron Variant) ಸೋಂಕು ದೃಢಪಟ್ಟ ನಂತ್ರ , ಮುಂಜಾಗ್ರತಾ ಕ್ರಮವಾಗಿ ಮಾಲ್ ಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಠಿಣ ನಿಮಯ ಜಾರಿಗೊಳಿಸಲಾಗಿದೆ .

ಹೌದು, ಈ ಬಗ್ಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟ ನಂತ್ರ, ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಂದು ಶಾಪಿಂಗ್ ಮಾಲ್, ಥಿಯೇಟರ್ ಪ್ರವೇಶಿಸಬೇಕೆಂದರೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿದೆ ಎಂದು ಆಧಿಕೃತ ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ಎರಡು ಡೋಸ್ ಲಸಿಕೆ ( Covid19 Vaccine ) ಪಡೆದವರಿಗೆ ಮಾತ್ರವೇ ಮಾಲ್ ಒಳ ಪ್ರವೇಶಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ.

ಹೌದು.. ಬೆಂಗಳೂರಿನಲ್ಲಿ ಈಗ ಒಮಿಕ್ರಾನ್ ಭೀತಿ ಆರಂಭಗೊಂಡಿದ್ದು, ಎಲ್ಲೆಲ್ಲೂ ಕೋವಿಡ್-19 ಹೊಸ ರೂಪಾಂತರಿ ತಡೆಯ ಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಮಾಲ್ ಗಳಿಗೆ ಪ್ರವೇಶಿಸೋದಕ್ಕೆ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಾಲ್ ಗಳ ( Mall ) ಪ್ರವೇಶ ದ್ವಾರದಲ್ಲಿ ನಾಮಫಲಕ ಕೂಡ ಹಾಕಲಾಗಿದ್ದು, 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಒಳ ಪ್ರವೇಶಿಸೋದಕ್ಕೆ ಅನುಮತಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನೂ, ಮಾಲ್ ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಇನ್ನೂ ಪ್ರತಿಯೊಂದು ಮಾಲ್ ಗಳ ಪ್ರವೇಶ ದ್ವಾರದ ಮುಂದೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮಾಲ್ ಗಳ ಒಳ ಪ್ರವೇಶಿಸುವಂತ ಸಾರ್ವಜನಿಕರಿಂದ 2 ಡೋಸ್ ಲಸಿಕೆ ಪಡೆದ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿ, ಆನಂತ್ರ ಒಳಗೆ ಹೋಗೋದಕ್ಕೆ ಅವಕಾಶ ನೀಡಲಾಗುತ್ತಿದೆ. ಒಂದು ವೇಳೆ 2 ಡೋಸ್ ಲಸಿಕೆ ಪಡೆದಿಲ್ಲವಾದರೇ, ವಾಪಾಸ್ ಕಳುಹಿಸಲಾಗುತ್ತಿರೋದು ಕಂಡು ಬಂದಿದೆ.