ಹಳೆ ಕಟ್ಟಡವನ್ನು ವಾಸಸ್ಥಾನ ಮಾಡಿಕೊಂಡ ಚಿರತೆ
ನೃಪತುಂಗ ಬೆಟ್ಟದಲ್ಲಿ ಪತ್ತೆಯಾದ ಚಿರತೆ ಸೆರೆ ಕಾರ್ಯಾಚರಣೆಗೆ ಅಗತ್ಯವಿದ್ದರೆ ಮೈಸೂರು, ಚಾಮರಾಜ ನಗರದ ತಜ್ಞರ ತಂಡವನ್ನು ಕರೆಸಲಾಗುವುದು, ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು. ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಗದಗ, ಧಾರವಾಡ, ಕಲಘಟಗಿ ಭಾಗಗಳಿಂದ ಬಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಅರವಳಿಕೆ ತಜ್ಞರ ತಂಡವು ಸಹ ಸನ್ನದ್ಧವಾಗಿದೆ ಎಂದರು. ಕೇಂದ್ರೀಯ ವಿದ್ಯಾಲಯದ ಹಳೆ ಕಟ್ಟಡವನ್ನು ಚಿರತೆ ವಾಸಸ್ಥಾನ ಮಾಡಿಕೊಂಡಿದೆ. ಅಲ್ಲಿ ಅದರ ಹೆಜ್ಜೆ ಹಾಗೂ ಉಗುರಿನಿಂದಾದ ಗೀರು ಗುರುತು ಪತ್ತೆಯಾಗಿದೆ. ಕಟ್ಟಡ ತೆರವು ಕಾರ್ಯಾಚರಣೆ ನಾಳೆಯಿಂದಲೇ ಆರಂಭವಾಗಲಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಡಿಸಿಪಿ ಕೆ. ರಾಮರಾಜನ್, ತಹಶೀಲ್ದಾರ್ ಶಶಿಧರ ಮಾಡ್ಯಾಳ, ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ಹಾಗೂ ವೀರಣ್ಣ ಸವಡಿ, ವಿಜಯಾನಂದ ಹೊಸಕೋಟೆ, ಸಿದ್ದು ಮೊಗಲಿಶೆಟ್ಟರ್, ಎಂ.ಎಸ್. ಪಾಟೀಲ ಇದ್ದರು.