ಬೆಂಕಿ ಅವಘಡ ಮಹಿಳೆ ಸಜೀವ ದಹನ
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ಬಳಿಯಿರುವ ದೇವರಚಿಕ್ಕನಹಳ್ಳಿಯ ಅಶ್ರಿತ್ ಆಸ್ಪೈರ್ ಅಪಾರ್ಟ್ಮೆಂಟ್ನ ಎರಡನೇ ಮಹಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಾಗ್ಯಲಕ್ಮೀ ಎಂಬ ಮಹಿಳೆಯು ಸಜೀವ ದಹನವಾಗಿದ್ದಾರೆ. ಇನ್ನು ಕೆಲವರು ಸಿಲುಕಿರುವ ಶಂP ವ್ಯಕ್ತವಾಗಿದೆ. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮುಂದುವರೆಸಿದೆ.