ಮುಂದುವರಿದ ಚಿರತೆ ಕಾರ್ಯಾಚರಣೆ; 12 ಶಾಲೆಗಳಿಗೆ ರಜೆ
ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕಂಡು ಬಂದಿರುವ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, 12 ಶಾಲೆಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ. ನಾಳೆಯಿಂದ ಬೆಟ್ಟದ ಸಮೀಪದ ಜನತಾ ಪ್ರೌಢಶಾಲೆ ಹಾಗೂ ಶಿರಡಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಬ್ಬಳ್ಳಿಯ ಜನತಾ ಪ್ರೌಢಶಾಲೆ ಹಾಗೂ ಶಿರಡಿ ನಗರ, ಚಾಮುಂಡೇಶ್ವರಿ ನಗರ, ಸಂತೋಷ ನಗರ, ಅಶೋಕ ನಗರ, ವಿಶ್ವೇಶ್ವರ ನಗರಗಳಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢಶಾಲೆ, ಜೆ.ಕೆ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಡಿ.ಕೆ. ಪಬ್ಲಿಕ್ ಸ್ಕೂಲ್, ಚೈತ್ರಾ ಕನ್ನಡ ಕಾನ್ವೆಂಟ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ವಿ.ಎಸ್. ಪಿಳ್ಳೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಎನ್.ಕೆ. ಠಕ್ಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸೇರಿದಂತೆ 12 ಶಾಲೆಗಳಿಗೆ ಚಿರತೆ ಸೆರೆ ಹಿಡಿದು, ಕಾರ್ಯಾಚರಣೆ ಮುಗಿಯುವವರೆಗೆ ರಜೆ ಘೊಷಿಸಲಾಗಿದೆ ಮತ್ತು ಶಾಲೆಗಳು ಪುನರಾರಂಭವಾಗುವವರೆಗೆ ಶಾಲಾ ಮಕ್ಕಳ ಪಾಠ ಬೋಧನೆಯನ್ನು ಆನ್ಲೈನ್ ಮೂಲಕ ಮುಂದುವರೆಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.