ಮುಖ್ಯಮಂತ್ರಿ ಜಿಲ್ಲೆ ಹಾವೇರಿ ವಿಭಾಗದಲ್ಲಿ ಹಗಲುದರೋಡೆಗಿಳಿದ ಕೆಎಸ್ಆರ್ಟಿಸಿ ಅಧಿಕಾರಿಗಳು

ಮುಖ್ಯಮಂತ್ರಿ ಜಿಲ್ಲೆಯಾದ ಹಾವೇರಿ ವಿಭಾಗದಲ್ಲಿ ಬಸ್ಸು ಟಿಕೆಟ್ ದರ ಏರಿಸಿ ಕೆಎಸ್ಆರ್ಟಿಸಿ ಅಧಿಕಾರಿಗಳು ಹಗಲುದರೋಡೆಗಿಳಿದಿದ್ದು, ಬೇರೆಲ್ಲೂ ಇಲ್ಲದ ನೀತಿ ನಿಯಮ ಇಲ್ಲಿ ಮಾತ್ರ ಏಕೆ ಎಂದು ಉತ್ತರ ಕರ್ನಾಟಕ ರೈತ ಸಂಘಟನೆ ಪ್ರಶ್ನಿಸಿದೆ. ಬಸ್ ದರ ಏರಿಕೆ ಖಂಡಿಸಿ ಉತ್ತರ ಕರ್ನಾಟಕ ರೈತ ಸಂಘಟನೆ ಹಾಗೂ ಭಾರತೀಯ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ ನೇತೃತ್ವದಲ್ಲಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿ, ಈಗಾಗಲೇ ಜನರು ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಈ ಮಧ್ಯೆ ಏಕಾಏಕಿ ಬಸ್ ದರ ಹೆಚ್ಚಿಸಿರುವುದು ಖಂಡನೀಯ. ಬಸ್ ದರವನ್ನು ಇಳಿಸಿ ಸಾರಿಗೆ ಇಲಾಖೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಸೆಪ್ಟೆಂಬರ್ 29 ರಂದು ಹಿರೇಕೆರೂರು ಡಿಪೆÇೀ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಶೇಖರ್ ದುದಿಹಳ್ಳಿ, ಶಿವಣ್ಣ ಜವನವರು, ಬಸಪ್ಪ ಕೆಳಗಿನಮನಿ, ಚಂದ್ರಪ್ಪ ಮುತ್ತಗಿ, ಈರಪ್ಪ ಮಳವಳ್ಳಿ, ಕರಿಬಸಪ್ಪ ಬಸರಿಹಳ್ಳಿ ಚಂದ್ರಶೇಖರ್ ಮನೇರ್, ಶಿವಪ್ಪ ನೂಲಗೇರಿ ಗುರು ಕಡೆಮನಿ ಇದ್ದರು.