ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವ ವಿದೇಶಿ ವಿದ್ಯಾರ್ಥಿಗಳ ಪೈಕಿ 'ಭಾರತೀಯರೇ ಮೇಲುಗೈ'

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವ ವಿದೇಶಿ ವಿದ್ಯಾರ್ಥಿಗಳ ಪೈಕಿ 'ಭಾರತೀಯರೇ ಮೇಲುಗೈ'

ಬೆಂಗಳೂರು: ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರೇ ಹೆಚ್ಚು. ಹೌದು, ಈ ಕುರಿತು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಎಜುಕೇಷನ್‌ ಪ್ರಕಟಿಸುವ ಓಪನ್‌ ಡೋರ್ಸ್‌ ರಿಪೋರ್ಟ್‌ ಪ್ರಕಾರ 2021-22ರ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು ಎರಡು ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕ ಆಯ್ಕೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಪ್ರವೇಶ ಕಳೆದ ವರ್ಷಕ್ಕಿಂತ ಶೇ.19ರಷ್ಟು ಹೆಚ್ಚಳವಾಗಿದ್ದು, ಅಮೇರಿಕದಲ್ಲಿ ಕಲಿಯುತ್ತಿರುವ ದಶ ಲಕ್ಷಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.21ರಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲು ಯು.ಎಸ್‌. ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ ಅಫೇರ್ಸ್‌ ಭಾರತದಾದ್ಯಂತ ನವದೆಹಲಿ, ಚೆನ್ನೈ, ಕೊಲ್ಕತಾ, ಬೆಂಗಳೂರು, ಅಹಮದಾಬಾದ್‌, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ವರ್ಚುಯಲ್‌ ರೂಪದಲ್ಲಿ ಮತ್ತು ವೈಯಕ್ತಿಕವಾಗಿ ಎಜುಕೇಷನ್‌ ಯುಎಸ್‌ಎ ಅಡ್ವೆ„ಸಿಂಗ್‌ ಸೆಂಟರ್‌ಗಳಲ್ಲಿ ಉಚಿತ ಸಲಹಾ ಸೇವೆಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ