ಮನೆ ಸೇರಿದ ವೃದ್ಧೆ ಜಯಮ್ಮ; ನಾಲ್ಕು ತಿಂಗಳ ಹಿಂದೆ ಕೋಲಾರದಿಂದ ನಾಪತ್ತೆ

ಮನೆ ಸೇರಿದ ವೃದ್ಧೆ ಜಯಮ್ಮ; ನಾಲ್ಕು ತಿಂಗಳ ಹಿಂದೆ ಕೋಲಾರದಿಂದ ನಾಪತ್ತೆ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ 4-5 ತಿಂಗಳುಗಳಿಂದ ಚಿಕಿತ್ಸೆ ಪಡೆಯು ತ್ತಿದ್ದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹಸಂಡಳ್ಳಿ ಗ್ರಾಮದ ಜಯಮ್ಮ (70) ಅವರನ್ನು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ನೇತೃತ್ವದಲ್ಲಿ ವಿಹಿಂಪ ಪದಾಧಿಕಾರಿಗಳು ಸಂಬಂಧಿಕರ ಮೂಲಕ ಊರಿಗೆ ವಾಪಸು ಕಳುಹಿಸಿಕೊಟ್ಟಿದ್ದಾರೆ.

ಜಯಮ್ಮ 4 ತಿಂಗಳ ಹಿಂದೆ ಊರಿನಿಂದ ನಾಪತ್ತೆಯಾಗಿದ್ದರು. ಮಂಗಳೂರಿಗೆ ಬಂದಿದ್ದ ಅವರನ್ನು ಯಾರೋ ವೆನ್ಲಾಕ್ ಗೆ ದಾಖಲಿಸಿದ್ದರು. ಮರೆವಿನ ರೋಗದಿಂದ ಬಳಲುತ್ತಿರುವ ಅವರು ತಮ್ಮ ಹೆಸರು, ಊರು, ವಿಳಾಸ ಮರೆತಿದ್ದರು.

ಸತತ ಪ್ರಯತ್ನದ ಬಳಿಕ ಜಗದೀಶ್‌ ಶೇಣವ ಹಾಗೂ ವೆನ್ಲಾಕ್ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧಿಕಾರೇತರ ಸದಸ್ಯರೂ ಆಗಿರುವ ವಿಹಿಂಪ ಜಿಲ್ಲಾ ಸಹಸೇವಾ ಪ್ರಮುಖ್‌ ಕಾರ್ತಿಕ್‌ ಪಂಪ್‌ವೆಲ್‌ ಅವರು ಊರು ಮತ್ತು ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಮಂಗಳೂರು, ಬೆಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಚಿಕ್ಕತಿರುಪತಿ, ದೊಡ್ಡತಿರುಪತಿ ಮೊದಲಾದೆಡೆ ಹುಡುಕಿ ಸೋತು ಹೋಗಿದ್ದೆವು. ಅಜ್ಜಿ ಮರಳಿ ಸಿಗುವ ಆಸೆಯನ್ನೇ ಬಿಟ್ಟಿದ್ದೆವು. ಮಾಸ್ತಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದೆವು. ಕೊನೆಗೂ ಮಂಗಳೂರಿನಲ್ಲಿ ಪತ್ತೆಯಾಗಿ ಸುರಕ್ಷಿತವಾಗಿ ನಮಗೆ ಒಪ್ಪಿಸಿರುವುದು ಖುಷಿ ತಂದಿದೆ. ಸಹಾಯ ಮಾಡಿದವರಿಗೆ ಚಿರಋಣಿಯಾಗಿದ್ದೇವೆ.
– ಕುಮಾರ್‌, ಮೊಮ್ಮಗ