ನೀವು ಸರ್ವನಾಶವಾಗಿ ಹೋಗುತ್ತೀರಾ: ಡಿಕೆಶಿ ವಿರುದ್ದ ಮುತಾಲಿಕ್‌‌ ಕಿಡಿ

ನೀವು ಸರ್ವನಾಶವಾಗಿ ಹೋಗುತ್ತೀರಾ: ಡಿಕೆಶಿ ವಿರುದ್ದ ಮುತಾಲಿಕ್‌‌ ಕಿಡಿ

ಧಾರವಾಡ: ನಿಮ್ಮ ತುಷ್ಟೀಕರಣದಿಂದಲೇ ಕಾಂಗ್ರೆಸ್‌ ಇಂದು ಈ ಸ್ಥಿತಿಗೆ ಬಂದಿದೆ. ಇನ್ನೂ ಅರ್ಥ ಮಾಡಿಕೊಂಡಿಲ್ಲ ಅಂದರೆ, ನೀವು ಸರ್ವನಾಶವಾಗಿ ಹೋಗುತ್ತೀರಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ದ ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೊಡೋದು ಸರಿಯಲ್ಲ. ಇದನ್ನು ನಾನು ವಿರೋಧಿಸುತ್ತೇನೆ. ಟೆರರಿಸ್ಟ್‌ಗಳ ಬಗ್ಗೆ ಒಲವು ತೋರುವಂತೆ ಡಿಕೆಶಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.