ಎಲೆಚುಕ್ಕೆ' ರೋಗದ ಆತಂಕದಲ್ಲಿರುವ ರೈತರಿಗೆ ಗುಡ್ ನ್ಯೂಸ್ : ಹೆಚ್ಚಾಗಲಿದೆ 'ಅಡಿಕೆ' ಬೆಲೆ

ಎಲೆಚುಕ್ಕೆ' ರೋಗದ ಆತಂಕದಲ್ಲಿರುವ ರೈತರಿಗೆ ಗುಡ್ ನ್ಯೂಸ್ : ಹೆಚ್ಚಾಗಲಿದೆ 'ಅಡಿಕೆ' ಬೆಲೆ

ಬೆಂಗಳೂರು : ಎಲೆಚುಕ್ಕೆ ರೋಗದ ಆತಂಕದಲ್ಲಿರುವ ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು 351 ರೂ ಗೆ ಹೆಚ್ಚಳ ಮಾಡಿದೆ.

ಕೇಂದ್ರ ಸರ್ಕಾರದಿಂದ ವಿದೇಶದಿಂದ ಭಾರತಕ್ಕೆ ತರುವ ಅಡಿಕೆ ಆಮದು ದರವನ್ನು ಹೆಚ್ಚಳ ಮಾಡಲಾಗಿದೆ.

ಇದರಿಂದ ಸ್ವದೇಶಿ ಅಡಿಕೆ ಬೆಳೆಗಾರರಿಗೆ ಲಾಭವಾಗಲಿದೆ. ಸಹಜವಾಗಿತೇ ದೇಶಿಯ ಅಡಿಕೆ ಬೆಲೆ ಹೆಚ್ಚಾಗಲಿದೆ. ಅಡಿಕೆ ಮೇಲಿನ ಕನಿಷ್ಟ ಆಮದು ಬೆಲೆಯು 251 ರೂಗಳಾಗಿತ್ತು. ಇದೀಗ 100 ರೂ. ಏರಿಕೆ ಮಾಡಲಾಗಿದೆ. ಇದರಿಂದ ದೇಶಿಯ ಅಡಕೆಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.

ಹೊರ ದೇಶಗಳಿಂದ ಆಗುತ್ತಿದ್ದ ಆಮದು ದರವನ್ನು ₹100 ಹೆಚ್ಚಿಸಿದೆ. ಈವರೆಗೆ ಕನಿಷ್ಠ ಆಮದು ದರ ₹251 ಇದ್ದರೆ ಇನ್ನು ಮುಂದೆ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡುವ ಮೂಲಕ ಆಮದು ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಟ್ವಿಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಟ್ವಿಟ್ ಮಾಡಿದ್ದಾರೆ. ಇದೇ ವೇಳೆ ಅವರು ಅಡಿಕೆ ಬೆಳೆಗಾರರ ಹಿತ ಕಾಯುವ ಕೇಂದ್ರದ ಈ ನಿರ್ಧಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಅಂಥ ತಿಳಿಸಿದ್ದಾರೆ.

ಹಿಂದಿನ ₹251 ಕನಿಷ್ಠ ಆಮದು ದರವನ್ನು ₹100 ಗಳಿಂದ, ₹351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ₹351 ಕ್ಕಿಂತ ಹೆಚ್ಚಿನ ಬೆಲೆ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಹೊರದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರಿಗೆ ಶಾಪವಾಗಿ ಪರಿಣಾಮಿಸಿತ್ತು.