ಮಹಿಳಾ ಮಣಿಗಳೇ ಗಮನಿಸಿ ; ಕೇಂದ್ರ ಸರ್ಕಾರದಿಂದ ಅದ್ಭುತ 'ಯೋಜನೆ' ಆರಂಭ, ಈ ಕುರಿತು ಮಹತ್ವದ ಮಾಹಿತಿ ಇಲ್ಲಿದೆ

ನವದೆಹಲಿ : ಕೇಂದ್ರ ಸರ್ಕಾರವು ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನ ಪರಿಚಯಿಸುತ್ತದೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಯನ್ನ ಘೋಷಿಸಿದರು.
ವಿಶೇಷವಾಗಿ ಸಣ್ಣ ಮಹಿಳಾ ಉಳಿತಾಯ ಖಾತೆದಾರರಿಗಾಗಿ ಈ ಯೋಜನೆಯನ್ನ ಪರಿಚಯಿಸಲಾಗಿದ್ದು, ಈ ಯೋಜನೆಯಲ್ಲಿ ಹೆಣ್ಣು ಮಗು ಅಥವಾ ಮಹಿಳೆಯರ ಹೆಸರಿನಲ್ಲಿ ಠೇವಣಿ ಮಾಡಬಹುದು. ಮಹಿಳೆಯರ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಅವಧಿಗೆ ಲಭ್ಯವಿದೆ, ಅಂದರೆ 2025 ರವರೆಗೆ ಠೇವಣಿ ಇರಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಗರಿಷ್ಠ ಠೇವಣಿ ರೂ.2 ಲಕ್ಷದವರೆಗೆ ಮಾತ್ರ ಇರಬೇಕು. 7.5 ರಷ್ಟು ಬಡ್ಡಿ ಇರುತ್ತದೆ. 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ'ಯಲ್ಲಿ ಭಾಗಶಃ ಹಿಂಪಡೆಯಲು ಭಾರತ ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, ನೀವು ಆದಾಯ ತೆರಿಗೆ ನಿಯಮಗಳ 80 cc ವರೆಗೆ ತೆರಿಗೆ ರಿಯಾಯಿತಿ ಪ್ರಯೋಜನಗಳನ್ನ ಪಡೆಯಬಹುದು. ಆದ್ರೆ, ಈ ಯೋಜನೆಯು ಪ್ರಸ್ತುತ ಲಭ್ಯವಿರುವ FD ಗಿಂತ ಹೆಚ್ಚು ಲಾಭದಾಯಕವಾಗಿದೆಯೇ? ನಷ್ಟವೇ? ಮುಂದೆ ಓದಿ.
FD ಮತ್ತು MSSC ಯೋಜನೆಯ ನಡುವಿನ ವ್ಯತ್ಯಾಸಗಳು.?
ದೇಶದ ಎಲ್ಲಾ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಸರಾಸರಿ 6.75 ಶೇಕಡಾ ಬಡ್ಡಿಯನ್ನ ನೀಡುತ್ತಿವೆ. ಎಚ್ಡಿಎಫ್ಸಿ, ಐಸಿಐಸಿಐ, ಕೊಟಕ್ ಮಹೀಂದ್ರಾ ಮುಂತಾದ ಖಾಸಗಿ ಬ್ಯಾಂಕ್ಗಳು ಶೇಕಡಾ 7ರವರೆಗೆ ಬಡ್ಡಿಯನ್ನ ನೀಡುತ್ತವೆ. ಇವುಗಳಿಗೆ ಹೋಲಿಸಿದ್ರೆ, ಎಂಎಸ್‌ಎಸ್ಸಿ ಯೋಜನೆಯಡಿ ಠೇವಣಿ ಇಟ್ಟರೆ ಶೇ.0.50-1.00ರಷ್ಟು ಹೆಚ್ಚಿನ ಬಡ್ಡಿ ಪಡೆಯಲು ಸಾಧ್ಯವಿದೆ. ಅಲ್ಲದೆ, ಆರ್ಬಿಐ ನಿಯಮಗಳ ಪ್ರಕಾರ, ಆಯಾ ಬ್ಯಾಂಕ್ಗಳು ರೂ.5 ಲಕ್ಷ ಅಪಾಯ ವಿಮೆಯನ್ನ ಹೊಂದಿವೆಯೇ? ಅಥವಾ ಇಲ್ಲ ನೋಡಿಕೊಳ್ಳಬೇಕು. ಹಾಗಾಗಿ ಎಂಎಸ್ ಎಸ್ ಸಿ ಯೋಜನೆಯಡಿ ಹೂಡಿಕೆ ಮಾಡುವ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಯ ಬಗ್ಗೆ ಸೂಕ್ತ ವಿಚಾರಣೆ ನಡೆಸುವುದು ಉತ್ತಮ ಎನ್ನುತ್ತಾರೆ ಹಣಕಾಸು ಕ್ಷೇತ್ರದ ತಜ್ಞರು.