50 ಸಾವಿರದಿಂದ 1 ಲಕ್ಷ ರೂ. ಬೆಲೆಯ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

50 ಸಾವಿರದಿಂದ 1 ಲಕ್ಷ ರೂ. ಬೆಲೆಯ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಟ್​​ಬಾಯ್ ಆಗಿ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿ, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್​​ವುಡ್​​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.

ಎಂಬ ಮಾಹಿತಿ ರಿವೀಲ್ ಆಗಿದೆ.

ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ದರ್ಶನ್ ಆರಂಭದಲ್ಲಿ ಕೇವಲ 90 ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದ್ರೀಗ ಅತಿಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ರಾಬರ್ಟ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಕುರಿತು ಮಾತನಾಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್ ಜೀನ್ಸ್ ಪ್ಯಾಂಟ್ ಧರಿಸುತ್ತೇನೆ. ರಾಬರ್ಟ್ ಸಿನಿಮಾಗೆ ಇದೇ ರೀತಿಯ 15 ರಿಂದ 20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತಿತ್ತು. ಈ ಬಗ್ಗೆ ತಿಳಿದ ದರ್ಶನ್, 4 ರಿಂದ 5 ಜೀನ್ಸ್ ತೆಗೆದುಕೊಂಡು ಬನ್ನಿ ಸಾಕು. ನನ್ನ ಬಳಿ ಇನ್ನೂ ಹಾಕಿಕೊಳ್ಳದ ಜೀನ್ಸ್ ಇವೆ. ಅವುಗಳನ್ನೇ ಸಿನಿಮಾಗೆ ಹಾಕಿಕೊಳ್ಳುತ್ತೇನೆ. ಇದರಿಂದ ಪ್ರೊಡಕ್ಷನ್ ಹಣ ಉಳಿತಾಯವಾಗುತ್ತದೆ ಎಂದಿದ್ದರಂತೆ.

ಸಿನಿಮಾಗಾಗಿ ಮಾತ್ರ ದುಬಾರಿ ಜೀನ್ಸ್

ಅಂದಹಾಗೆ, ಡಿ ಬಾಸ್ ಸಿನಿಮಾಗಾಗಿ ಮಾತ್ರ ೫೦ ಸಾವಿರದಿಂದ 1 ಲಕ್ಷ ರೂಪಾಯಿ ಬೆಲೆಯ ಜೀನ್ಸ್ ಧರಿಸುವುತ್ತಾರಂತೆ. ಉಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಆಗಿರುವ ಬಟ್ಟೆಯನ್ನು ಧರಿಸುತ್ತಾರೆ. ತಾವು ಹೆಚ್ಚು ಬೆಳೆಯ ಬಟ್ಟೆ ಧರಿಸುವುದಿಲ್ಲ ಅಂತ ಅವರೇ ಕೆಲವು ಬಾರಿ ಹೇಳಿಕೊಂಡಿದ್ದರು.

ಕಾರುಗಳ ಮೇಲೆ ಕ್ರೇಜ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಟ್ಟೆಗಳಿಗಿಂತ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಭಾರತದ ಮಾರುಕಟ್ಟೆಯಲ್ಲಿ ಬಂದಿರುವ ಹಲವಾರು ಐಷಾರಾಮಿ ಕಾರುಗಳು ದರ್ಶನ್ ಬಳಿಯಿವೆ. ಮಿನಿ ಕೂಪರ್, ಟೊಯೋಟಾ ವೆಲ್ ಫೇರ್, ರೇಂಜ್ ರೋವರ್, ಪೋರ್ಡ್ ಮಸ್ಟಾಂಗ್, ಪೋರ್ಶ್ ಕಾಯೆನ್ನೆ, ಲ್ಯಾಂಬೊರ್ಗಿನಿ ಉರುಸ್, ಲ್ಯಾಂಬೊರ್ಗಿನಿ ಅವೆಂಟೆಡಾರ್ ಸೇರಿದಂತೆ ಅನೇಕ ಕಾರುಗಳು ದರ್ಶನ್ ಬಳಿಯಿವೆ.

ಕಷ್ಟ ಎಂದವರಿಗೆ ಮಿಡಿಯುವ ದಾಸ

ದರ್ಶನ್ ಇಷ್ಟು ಎತ್ತರಕ್ಕೆ ಬೆಳೆದು ನಿಂತರೂ ಕೂಡ ತಮ್ಮ ಆರಂಭಿಕ ಹಾಗೂ ಕಷ್ಟದ ದಿನಗಳನ್ನು ಮರೆತಿಲ್ಲ. ಕಷ್ಟ ಅಂತ ಮನೆ ಬಾಗಿಲಿಗೆ ಬಂದವರನ್ನು ದರ್ಶನ್ ಎಂದಿಗೂ ಹಾಗೆಯೇ ಕಳಿಸುವುದಿಲ್ಲ. ಚಿತ್ರರಂಗದವರೇ ಆಗಿರಲಿ, ಅಭಿಮಾನಿಗಳೇ ಆಗಿರಲಿ ಅಥವಾ ಸಾಮಾನ್ಯ ಜನರೇ ಆಗಿರಲಿ ದರ್ಶನ್ ಎಲ್ಲರಿಗೂ ಆರ್ಥಿಕ ಸಹಾಯ ಮಾಡಿದ್ದಾರೆ. ದರ್ಶನ್ ಈ ಗುಣವನ್ನು ಮೆಚ್ಚಿಕೊಂಡವರು ಅನೇಕ ಜನರಿದ್ದಾರೆ. ಇನ್ನು ಚಿತ್ರರಂಗದಲ್ಲೂ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರಲ್ಲಿದೆ. ಹೊಸ ಕಲಾವಿದರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಸಾಂಗ್, ಟೀಸರ್ ಲಾಂಚ್ ಎಲ್ಲದಕ್ಕೂ ಹೋಗಿ ಚಿತ್ರವನ್ನು ಗೆಲ್ಲುಸುವಂತೆ ಮನವಿ ಮಾಡುತ್ತಾರೆ. ಇದರ ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಆಗಾಗ ಧಾನ್ಯಗಳನ್ನು ದಾನ ಮಾಡುತ್ತಿರುತ್ತಾರೆ.