ಧಾರವಾಡ ಅತ್ಯಾಚಾರ ಪ್ರಕರಣ: ಇಬ್ಬರ ಸೆರೆ
ಧಾರವಾಡ ಅತ್ಯಾಚಾರ ಪ್ರಕರಣ: ಇಬ್ಬರ ಸೆರೆ
ಇಲ್ಲಿನ ನೆಹರುನಗರದ ಶ್ರೀನಿವಾಸ ಮತು ಗಣೇಶನಗರದ ಫಯೂಮ್ ಎಂಬುವರೇ ಬಂಧತಿ ಆರೋಪಿಗಳು. ಬಂಧಿತರು, ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಗೊತ್ತಾಗಿದೆ.
ಅಪ್ರಾಪ್ತಳು ಕೂಡ ಧಾರವಾಡದವಳೇ ಎನ್ನಲಾಗಿದೆ. ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ, ಕರೆದಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸ ಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಪಿಐ ರಮೇಶ ಹೂಗಾರ, ಪಿಎಸ್‌ಐ ಶ್ರೀಮಂತ ಹುಣಸಿಕಟ್ಟಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.