ಬೆಂಗಳೂರಲ್ಲಿ 'ವಾಹನಗಳ ಪರಿಶೀಲನೆ ಪೊಲೀಸರು ಫುಲ್ ಅಲರ್ಟ್, ಆರಂಭ' : ಮೊದಲ ದಿನವೇ '10 ಕೆಜಿ ಬೆಳ್ಳಿ ವಶ

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆ(Karnataka Election)ಗಾಗಿ ಮತದಾರರ ಸೆಳೆಯೋದಕ್ಕೆ ರಾಜ್ಯದೆಲ್ಲೆಡೆ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಈ ಬೆನ್ನಲ್ಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ವಾಹನಗಳ ತಪಾಸನೆಯಲ್ಲಿ ತೊಡಗಿದ್ದಾರೆ.
ಅಭ್ಯರ್ಥಿಗಳು ಮತದಾರರಿಗಾಗಿ ಕುಕ್ಕರ್, ಸೀರೆ, ಹಣ, ಹಂಚೋದಕ್ಕೆ ಮುಂದಾಗಿದ್ದಾರೆ. ಇದನ್ನು ಮನಗಂಡ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ʼಶನಿವಾರ ರಾತ್ರಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿಬ್ಯಾರಿಕೇಡ್ ಹಾಕಿ ಬೈಕ್, ಕಾರು, ಆಟೋ, ಲಾರಿ ಸೇರಿದಂತೆ ಎಲ್ಲಾ ವಾಹನಗಳ ತಪಾಸನೆಯಲ್ಲಿ ತೊಡಗಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಎಸ್‌ಜೆ ಪಾರ್ಕ್ ಪೊಲೀಸರಿಂದ ದಾಖಲೆಯಿಲ್ಲದ ಹತ್ತು ಕೆಜಿ ಬೆಳ್ಳಿ ವಸ್ತುಗಳು ವಶಕ್ಕೆ ಪೊಲೀಸರು ಪಡೆದಿದ್ದಾರೆ ಎಂದು ವರದಿಯಾಗಿದೆ.
ಚುನಾವಣೆ ಅಧಿಕಾರಿಗಳು ಸಭೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿಗಳಿಗೆ ಹಣ, ವಸ್ತುಗಳು ಸಾಗಾಟ ಮಾಡಿದರೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ ದಾಖಲೆಯಿಲ್ಲ ವಸ್ತುಗಳು ಪತ್ತೆಯಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ಸೂಚನೆ ನೀಡಿದ್ದರು.