ಮಹಾತ್ಮ ಗಾಂಧೀಜಿ ಕಾನೂನು ಪದವೀಧರರಲ್ಲ

ಶ್ರೀನಗರ: “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪದವೀಧರರೆಂಬ ತಪ್ಪು ಕಲ್ಪನೆ ಹಲವರಲ್ಲಿದೆ.ಆದರೆ, ಗಾಂಧೀಜಿ ಕಾನೂನು ಪದವಿಯನ್ನೇ ಹೊಂದಿರಲಿಲ್ಲ’ ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿಕೆ ನೀಡಿದ್ದಾರೆ.
ಗ್ವಾಲಿಯರ್‌ನ ಐಟಿಎಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿನ್ಹಾ ಈ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ತುಷಾರ್,ರಾಜಕೋಟದ ಆಲ್ಫೆಡ್ ಹೈ ಸ್ಕೂಲ್‌ನಲ್ಲಿ ಒಂದು ಮೆಟ್ರಿಕ್ ಪರೀಕ್ಷೆ ಹಾಗೂ ಲಂಡನ್‌ನಲ್ಲಿ ಬ್ರಿಟಿಷ್ ಮೆಟ್ರಿಕ್ ಪರೀಕ್ಷೆಯನ್ನು ಗಾಂಧೀಜಿ ಪಾಸ್ ಮಾಡಿದ್ದರು ಎಂಬುದಕ್ಕೆ ಸಾಕ್ಷಿ ನೀಡಿದ್ದಾರೆ.
ಅಲ್ಲದೇ, ಲಂಡನ್ ಯೂನಿವರ್ಸಿಟಿ ವ್ಯಾಪ್ತಿಗೆ ಒಳಪಡುವ ಇನ್ನರ್ ಟೆಂಪಲ್ ಎನ್ನುವ ಕಾಲೇಜಿನಲ್ಲಿ ಕಾನೂನು ಪದವಿ ಶಿಕ್ಷಣ ಪೂರೈಸಿದಲ್ಲದೇ, ಗಾಂಧೀಜಿ ಲ್ಯಾಟಿನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ 2 ಡಿಪ್ಲೊಮೋ ಪಡೆದಿರುವುದಕ್ಕೂ ಸಾಕ್ಷಿಗಳನ್ನು ಒದಗಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತುಷಾರ್ “ಗಾಂಧೀಜಿ ಅವರ ಆತ್ಮಚರಿತೆಯನ್ನು ಜಮ್ಮು-ಕಾಶ್ಮೀರ ರಾಜ್ಯಪಾಲರ ಕಚೇರಿಗೆ ಕಳುಹಿಸಿದ್ದೇನೆ. ಅದನ್ನೂ ಓದಿಯಾದರೂ ಸಿನ್ಹಾ ತಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುತ್ತಾರೆಂದು ಭಾವಿಸುತ್ತೇನೆ’ ಎಂದಿದ್ದಾರೆ