ಟಿಪ್ಪುವನ್ನು ಪ್ರೀತಿಸುವವರು ಕರ್ನಾಟಕದಲ್ಲಿ ಇರಬಾರದು' : ಕಟೀಲ್ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ ಮತ್ತು ಹನುಮಾನ್ ಭಕ್ತರ ನಡುವೆ ಚುನಾವಣೆ ಸ್ಪರ್ಧೆ ಇದೆ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ರಾಮ ಮತ್ತು ಹನುಮಾನ್ ಭಕ್ತರೇ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತಾರಾ ಎಂದು ಪ್ರಶ್ನಿಸಿದರು. 'ನಾವು ರಾಮ ಮತ್ತು ಹನುಮಂತನ ಭಕ್ತರು. ನಾವು ಟಿಪ್ಪುವಿನ ವಂಶಸ್ಥರಲ್ಲ, ನಾವು ಅವನ ವಂಶಸ್ಥರನ್ನು ವಾಪಸ್ ಕಳುಹಿಸಿದ್ದೇವೆ. ಆದ್ದರಿಂದ ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ, ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತೀರಾ? ಟಿಪ್ಪುವಿನ ಭಜನೆಗಳನ್ನು ಹಾಡುವ ಜನರನ್ನು ನೀವು ಓಡಿಸುತ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ.
ಆದಾಗ್ಯೂ, ಅವರು ವಿವಾದವನ್ನು ಹುಟ್ಟುಹಾಕಿದ್ದು ಇದೇ ಮೊದಲಲ್ಲ, ಈ ವರ್ಷದ ಜನವರಿಯಲ್ಲಿ, ರಸ್ತೆಗಳು ಮತ್ತು ಒಳಚರಂಡಿ ವಿಷಯಗಳಿಗಿಂತ 'ಲವ್ ಜಿಹಾದ್' ವಿಷಯಕ್ಕೆ ಆದ್ಯತೆ ನೀಡುವಂತೆ ಪಕ್ಷದ ಕಾರ್ಯಕರ್ತರನ್ನು ಕೇಳಿದ್ದಕ್ಕಾಗಿ ಅವರು ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸಬೇಕಾಯಿತು.