ನಾವು ಎರಡೂ ಚುನಾವಣೆ ಗೆಲ್ತೇವೆ

ಚಿಕ್ಕಮಗಳೂರು

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸ್ಪೆಷಲ್ ನೀರು ದೋಸೆಯನ್ನು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸವಿದರು. ರಸ್ತೆ ಮಧ್ಯೆ ಗಾಡಿ ನಿಲ್ಲಿಸಿದ ಅವರು ಸಾಮಾನ್ಯ ಸರಳ ವ್ಯಕ್ತಿಯಂತೆ ಕಾರ್ಯಕರ್ತರ, ಸಾರ್ವಜನಿಕರ ಜೊತೆ ದೋಸೆ ತಿಂದು ಖುಷಿಪಟ್ಟರು. ನಂತರ ರಾಜ್ಯದಲ್ಲಿನ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯ ಕಾರ್ಯಶೈಲಿಯನ್ನು ಗಮನದಲ್ಲಿಟ್ಟುಕೊಂಡು ಸಿ.ಎಂ.ಬಸವರಾಜ್ ಬೊಮ್ಮಾಯಿ ಆಡಳಿತಾತ್ಮಕ ವಿಚಾರವಾಗಿ ಮಾರ್ಗದರ್ಶನ ನೀಡುತ್ತಾರೆ ನಾವು ಎರಡು ಚುನಾವಣೆ ಎದುರಿಸ್ತೇವೆ, ಎರಡನ್ನೂ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.