ಕೆಟ್ಟುನಿಂತ ಆಂಬುಲೆನ್ಸ್
ಚಾಮರಾಜನಗರ.
ಸರ್ಕಾರಿ ಆಸ್ಪತ್ರೆಯಿಂದ ಮೈಸೂರಿಗೆ ರೋಗಿಯನ್ನು ಸಾಗಿಸುವ108 ವಾಹನ ರಸ್ತೆಯಲ್ಲಿ ಕೈ ಕೊಟ್ಟು ರೋಗಿಯೊಬ್ಬರು ಪರದಾಡಿದ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುವ108 ವಾಹನ ರಸ್ತೆಯಲ್ಲಿ ಕೈ ಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗರಗನಹಳ್ಳಿ ಗೇಟ್ ಸಮೀಪ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರೋಗಗಳನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ನ ಹಬ್ ಕಟ್ ಅಗಿದ್ದರಿಂದ ರಸ್ತೆಯಲ್ಲಿ ನಿಲ್ಲುವಂತಾಗಿ ರೋಗಿಗಳು ಪರದಾಡುವಂತಾಯಿತು.
ಗುಂಡ್ಲುಪೇಟೆ ಯಿಂದ ಮತ್ತೊಂದು ಆಂಬುಲೆನ್ಸ್ ಬಂದು ಇಕ್ಕಟ್ಟಿನಲ್ಲಿ ರೋಗಿಗಳನ್ನು ಭರ್ತಿ ಮಾಡಿಕೊಂಡು ಮೈಸೂರಿನತ್ತ ಹೊರಟಿತು.
108 ವಾಹನಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದರಿಂದ 108 ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗುತ್ತಿದೆ.
ರಸ್ತೆ ನಡುವೆ ನಿಂತ 108 ವಾಹನವು 8 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಿದರು ಸಹ ಸರಿಯಾದ ನಿರ್ವಹಣೆ ಮಾಡದೇ ಇರುವುದು ಇಂತಹ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.