ಕಾರು ಅಡ್ಡಗಟ್ಟಿ ಅಪಾಯ ಮಾಡೋ ಸಂಚು ಮಾಡಿದ್ರು: ಈಶ್ವರ್ ಖಂಡ್ರೆ |Bidar|

ಬಬ್ಬ ಶಾಸಕ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷನಿಗೆ ಇವತ್ತು ರಕ್ಷಣೆ ಇಲ್ಲಾ: ಈಶ್ವರ ಖಂಡ್ರೆ ಸಮಾಜಘಾತುಕ ಶಕ್ತಿಗಳನ್ನು ತೆಗೆದುಕೊಂಡು ಹಿಂಬಾಲಿಸಿ ನನ್ನ ಕಾರು ಅಡ್ಡಗಟ್ಟಿ ಏನಾದ್ರು ಅಪಾಯ ಮಾಡಬೇಕು ಎಂಬ ಸಂಚು ಮಾಡಿದ್ರು ಎಂದು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೀದರ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.ನಾನು ಕಾರ್ಯಕರ್ತರ ಭೇಟಿಗೆ ಹೋದ ಎಲ್ಲಾ ಕಡೆಗಳಲ್ಲಿ ಪ್ರಕಾಶ್ ಖಂಡ್ರೆ ನನ್ನ ಹಿಂಬಾಲಿಸಿದ್ದು ಸೋಲು ಖಾತರಿಯಾದ ಮೇಲೆ ಹೇಗಾದ್ರು ಗಲಾಟೆ ಮಾಡಬೇಕು ಎಂದು ಬಹಳ ಪ್ರಯತ್ನ ಮಾಡಿದ್ದಾರೆ.ಬಬ್ಬ ಶಾಸಕ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷನಿಗೆ ಇವತ್ತು ರಕ್ಷಣೆ ಇಲ್ಲಾ ಅಂದ್ರೆ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ಸರ್ಕಾರ ರಕ್ಷಣೆ ಕೊಡುತ್ತದೆ ಅಲೋಚನೆ ಮಾಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.