ಜಾಗತಿಕ ಹೂಡಿಕೆದಾರರ ಸಭೆಗೂ ಮುನ್ನ ನಗರದಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಂಡ ಬಿಬಿಎಂಪಿ!

ಜಾಗತಿಕ ಹೂಡಿಕೆದಾರರ ಸಭೆಗೂ ಮುನ್ನ ನಗರದಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಂಡ ಬಿಬಿಎಂಪಿ!
ಬೆಂಗಳೂರಿನಲ್ಲಿ; ನವೆಂಬರ್ 2ರಿಂದ ಎರಡು ದಿನಗಳ ಕಾಲ 'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ' ಆಯೋಜಿಸಲಾಗಿದ್ದು, ದೇಶದ ಹಲವು ಬಂಡವಾಳ ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರು: ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ಎರಡು ದಿನಗಳ ಕಾಲ 'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ' ಆಯೋಜಿಸಲಾಗಿದ್ದು, ದೇಶದ ಹಲವು ಬಂಡವಾಳ ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಸ್ವಚ್ಛತಾ ಅಭಿಯಾನ' ಕಾರ್ಯಕ್ರಮ ಕೈಗೊಂಡಿದೆ. ನಗರದ ಸ್ವಚ್ಛತೆ ಮತ್ತು ಪ್ರಮುಖ ರಸ್ತೆಗಳ ಸೌಂದರ್ಯಕ್ಕೆ ಒತ್ತು ನೀಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಪಾಲಿಕೆ ವ್ಯಾಪ್ತಿಯ 8 ವಲಯ ಆಯುಕ್ತರಿಗೆ ಈ ಕುರಿತು ಸೂಚನೆ ನೀಡಿದ್ದಾರೆ. ನ.2 ರಿಂದ ನ.4ರವರೆಗೂ ನಡೆಯಲಿರುವ 'ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ' ಕಾರ್ಯಕ್ರಮಕ್ಕಾಗಿ, ದೇಶದ ಹಲವು ಭಾಗಗಳಿಂದ ಬಂಡವಾಳ ಹೂಡಿಕೆದಾರರು ನಗರಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ, ಪಾಲಿಕೆಯು ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ಇದಕ್ಕಾಗಿ ಸಮಾರೋಪಾದಿಯಲ್ಲಿ ಸಜ್ಜಾಗುತ್ತಿದೆ.ಅದರಂತೆ ನಗರದಾದ್ಯಂತ ರಸ್ತೆಗಳ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ರಸ್ತೆ ಬದಿ ಬಿದ್ದಿರುವ ತ್ಯಾಜ್ಯ ತೆರವು, ರಸ್ತೆ ಬದಿಯಿರುವ ಮರಗಳ ಕೊಂಬೆಗಳನ್ನು ತೆರವು, ಫ್ಲೆಕ್ಸ್, ಬ್ಯಾನರ್ಗಳ ತೆರವು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಇರುವ ಮೀಡಿಯನ್ಗಳನ್ನು ಅಭಿವೃದ್ಧಿ ಪಡಿಸಿ, ಸಸಿಗಳನ್ನು ನೆಡುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ.ಬಿಬಿಎಂಪಿಯ ಸ್ವಚ್ಛತಾ ಅಭಿಯಾನದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಪೂರ್ವ ವಲಯದ ಹೆಬ್ಬಾಳ ರಸ್ತೆ, ಮೇಕ್ರಿ ವೃತ್ತ, ಜಯಮಹಲ್ ರಸ್ತೆ, ದಕ್ಷಿಣ ವಲಯದ ಬನಶಂಕರಿ ವೃತ್ತ, ಕನಕಪುರ ರಸ್ತೆ, ಬೊಮ್ಮನಹಳ್ಳಿ ವಲಯದ ಕನಕಪುರ ಮುಖ್ಯ ರಸ್ತೆ, ಚುಚ್ಚನಘಟ್ಟ ಮುಖ್ಯ ರಸ್ತೆ, ಕೋಣನಕುಂಟೆ ರಸ್ತೆ ಹಾಗೂ ಯಶವಂತಪುರ ವಲಯ, ದಾಸರಹಳ್ಳಿ ವಲಯ ಸೇರಿದಂತೆ ಹಲವು ಸ್ಥಳಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತ್ತರ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿದರು. ವಲಯ ಆಯುಕ್ತರು ತಮ್ಮ ವಲಯಗಳಲ್ಲಿ ಪರಿಶೀಲನೆ ನಡೆಸಿ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ಜೊತೆಗೆ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವ ಸ್ಥಳಗಳಲ್ಲಿ ಪಾಲಿಕೆ ಅಧಿಕಾರಿಗಳು ಸಮನ್ವಯ ಮಾಡಿಕೊಂಡು ಕೂಡಲೇ ದುರಸ್ಥಿ ಕೆಲಸ ಆರಂಭಿಸಲು ಸೂಚನೆ ನೀಡಿದರು.