ತಳಮಟ್ಟದಲ್ಲಿ ಸಮಸ್ಯೆಗಳನ್ನು ಗುರುತಿಸಿ ಸುಧಾರಣೆ ಮಾಡಿ | Bangalore |
ಬೆಂಗಳೂರು ನಗರದ ಸ್ವಚ್ಛತೆಗಾಗಿ ನಾಗರೀಕರ ಸಹಭಾಗಿತ್ವ ಬಹಳ ಮುಖ್ಯ ಪಾತ್ರ ವಹಿಸಲಿದ್ದು, ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ನಗರದ ಸ್ವಚ್ಛತೆ ಕಾಪಾಡುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆಗಾಗಿ ನಾಗರೀಕರ ಸಹಭಾಗಿತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯ ಆಯುಕ್ತರು ಮಾತನಾಡಿ, ತಳಮಟ್ಟದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದನ್ನು ಸುಧಾರಣೆ ಮಾಡುವ ಕೆಲಸ ಆಗಬೇಕು. ಅಲ್ಲದೆ ಘನತ್ಯಾಜ್ಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸಂಸ್ಥೆಯಾಗಿದ್ದು, ಇದರಲ್ಲಿ ಪಾಲಿಕೆಯ ಜವಾಬ್ದಾರಿ ಮುಂದುವರಿಯಲಿದೆ. ಸಂಸ್ಥೆಯಿಂದ ಹೀಗಿರುವ ಚಟುವಟಿಕೆಗಳಿಗೆ ಪೂರಕವಾಗಿ ಕೆಲಸ ಆಗುತ್ತದೆಯೇ ವಿನಃ ಯಾವುದೇ ಬದಲಾವಣೆಯಾಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಸುಭಾμï ಬಿ ಆಡಿ, ವಿಶೇಷ ಆಯುಕ್ತರುಗಳಾದ ಡಾ. ಹರೀಶ್ ಕುಮಾರ್, ಡಿ. ರಂದೀಪ್, ರೆಡ್ಡಿ ಶಂಕರ ಬಾಬು, ದಯಾನಂದ್, ಬಸವರಾಜು, ಜಂಟಿ ಆಯುಕ್ತರು ಸರ್ಫರಾಜ್ ಖಾನ್, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಮಾರ್ಷಲ್ಗಳು, ನಾಗರೀಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.